Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಸೂಪರ್​ಸ್ಟಾರ್​ ಚಿತ್ರಕ್ಕೆ ಸೇರಿಕೊಂಡ ಲೇಡಿ ಸೂಪರ್​ಸ್ಟಾರ್

ಸೂಪರ್​ಸ್ಟಾರ್​ ಚಿತ್ರಕ್ಕೆ ಸೇರಿಕೊಂಡ ಲೇಡಿ ಸೂಪರ್​ಸ್ಟಾರ್

ಹೈದರಾಬಾದ್ : ಲೇಡಿ ಸೂಪರ್​ ಸ್ಟಾರ್ ನಯನಾತಾರಾ ಈಗ ಸಖತ್​ ಬ್ಯುಸಿ. ಹಲವು ಚಿತ್ರಗಳು ನಯನಾತಾರಾ ಕೈಯಲ್ಲಿವೆ. ತಮಿಳಿನಲ್ಲೇ ನಾಲ್ಕು ಚಿತ್ರಗಳನ್ನು ಕೈಯಲ್ಲಿ ಹಿಡಿದು ಸುತ್ತಾಡುತ್ತಿರುವ ನಯನಾತಾರಾಗೆ ಬೇರೆ ಭಾಷೆಗಳಿಂದಲೂ ಆಫರ್​ಗಳು ಬರುತ್ತಲೇ ಇವೆ. ಬಿಗ್​ಬಜೆಟ್​ ಚಿತ್ರಗಳಿಗೆಲ್ಲಾ ನಯನಾತಾರಾ ಈಗ ನಾಯಕಿಯಾಗಿದ್ದಾರೆ.

ತಮಿಳಿನ ನಾಲ್ಕು ದೊಡ್ಡ ಚಿತ್ರಗಳ ಜೊತೆ ಜೊತೆಗೆ ನಯನಾತಾರಾ ತೆಲುಗಿನ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಗೋಪಿಚಂದ್​ ಅಭಿನಯದ ಒಂದು ಚಿತ್ರ ಮತ್ತು ಬಾಲಕೃಷ್ಣ ಅಭಿನಯದ 102ನೇ ಚಿತ್ರಕ್ಕೆ ನಯನಾತಾರಾ ನಾಯಕಿ. ಸದ್ಯ ನಂದಮೂರಿ ಬಾಲಕೃಷ್ಣ ಅಭಿನಯದ 102ನೇ ಚಿತ್ರದ ಶೂಟಿಂಗ್​ಗೆ ನಯನಾತಾರಾ ಸೇರಿದ್ದಾರೆ. ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ.ಎಸ್​.ರವಿಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!