Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ಕಿಚ್ಚ ಸುದೀಪ್ ಈಗ ನಂಬರ್​ 1

ಕಿಚ್ಚ ಸುದೀಪ್ ಈಗ ನಂಬರ್​ 1

ಬೆಂಗಳೂರು : ಅಭಿನಯ ಚಕ್ರವರ್ತಿ ಎಂದೇ ಅಭಿಮಾನಿಗಳಿಂದ ಪ್ರೀತಿಯ ಕರೆಸಿಕೊಳ್ಳುವ ಕಿಚ್ಚ ಸುದೀಪ್​ ಈಗ ಟ್ವಿಟರ್​​ನಲ್ಲಿ ಪಾರಮ್ಯ ಮರೆದಿದ್ದಾರೆ. ಟ್ವಿಟರ್​​ ಫಾಲೋವರ್ಸ್​ಗಳ ಸಂಖ್ಯೆಯಲ್ಲಿ ಸ್ಯಾಂಡಲ್​ವುಡ್​​ ನಟ ನಟಿಯರಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ ಸುದೀಪ್​​. ಟ್ವಿಟರ್​ನಲ್ಲಿ ಸುದೀಪ್ ಅನುಯಾಯಿಗಳ ಸಂಖ್ಯೆ ಒಂದು ಮಿಲಿಯನ್​ ಅರ್ಥಾತ್​ 10 ಲಕ್ಷ ಮುಟ್ಟಿದೆ. ಇದು ಕಿಚ್ಚ ಸುದೀಪ್ ಪಡೆದ ಖ್ಯಾತಿಗೆ ಸಾಕ್ಷಿ…

ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಬಾಲಿವುಡ್, ಹಾಲಿವುಡ್​ನಲ್ಲೂ ಗಮನ ಸೆಳೆದವರು. ಇದು ನಮ್ಮ ಹೆಮ್ಮೆ. ಇದೇ ಖ್ಯಾತಿ ಸುದೀಪ್ ಅಫೀಶಿಯಲ್ ಟ್ವಿಟರ್​ನಲ್ಲೂ ಪ್ರತಿಫಲಿಸುತ್ತಿದೆ. ಇಷ್ಟು ದೊಡ್ಡ ಮಟ್ಟದ ಫಾಲೋವರ್ಸ್​ಗಳನ್ನು ಹೊಂದಿದ ಮೊದಲ ಕನ್ನಡ ನಟನಾಗಿ ಕಿಚ್ಚ ಹೊರಹೊಮ್ಮಿದ್ದಾರೆ. ಇನ್ನು, ಈ ಸಾಧನೆ ಮಾಡಿದ ಸುದೀಪ್ ಅವರಿಗೆ ಹಲವರು ಶುಭ ಹಾರೈಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!