Thursday , June 21 2018
ಕೇಳ್ರಪ್ಪೋ ಕೇಳಿ
Home / News NOW / ಮಗಳ ಮದುವೆಗೆ ಕೂಡಿಟ್ಟ ಹಣ ಹಾಳು ಮಾಡುತ್ತಿದ್ದ ಗಂಡ : ಸಿಟ್ಟೆದ್ದ ಪತ್ನಿ ಏನು ಮಾಡಿದಳು ಗೊತ್ತಾ?

ಮಗಳ ಮದುವೆಗೆ ಕೂಡಿಟ್ಟ ಹಣ ಹಾಳು ಮಾಡುತ್ತಿದ್ದ ಗಂಡ : ಸಿಟ್ಟೆದ್ದ ಪತ್ನಿ ಏನು ಮಾಡಿದಳು ಗೊತ್ತಾ?

ಚೆನ್ನೈ : ಆತ ಕಳ್ಳ. ಮನೆಯಲ್ಲಿ ಇದ್ದುದಕ್ಕಿಂತ ಜಾಸ್ತಿ ಇರುತ್ತಿದ್ದದ್ದು ಜೈಲಿನಲ್ಲಿಯೇ. ಜೈಲಿನಲ್ಲಿದ್ದಾಗ ಆತನ ಹೆಂಡತಿ ಹೇಗೊ ಕಷ್ಟಪಟ್ಟು ಜಾಮೀನು ಕೊಟ್ಟು ಬಿಡಿಸಿಕೊಂಡು ಬರುತ್ತಿದ್ದಳು. ಆದರೆ, ಈತ ಮನೆಯಲ್ಲೂ ಕಳ್ಳತನ ಮಾಡುತ್ತಿದ್ದ. ಈತನ ಹೆಂಡತಿ ಮಗಳ ಮದುವೆಗೆಂದು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ ಈತನಿಗೆ ಮಗಳ ಮದುವೆಯಾಗುವುದು ಕೂಡಾ ಬೇಕಿರಲಿಲ್ಲ.

ಒಂದು ಸಲ, ಈತ ಜೈಲಿನಲ್ಲಿರುವಾಗ ಮಗಳಿಗೆ ಮದುವೆ ಸಂಬಂಧವೊಂದು ಬಂದಿತ್ತು. ಮದುವೆಗೆ ತಾಯಿ ಸಿದ್ದತೆ ಕೂಡಾ ಮಾಡಿಕೊಂಡಿದ್ದರು. ಮಗಳು ಕೂಡಾ ಇದೇ ಮನೆಯಲ್ಲಿ ಇದ್ದಳು. ದಿನಗಳು ಉರುಳಿದಂತೆ ಜೈಲಿನಲ್ಲಿದ್ದ ಆತ ರಿಲೀಸ್ ಆದ. ಒಂದು ದಿನ ಹೆಂಡತಿ ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಮಗಳಿಗೆ ಚೆನ್ನಾಗಿ ಥಳಿಸಿದ್ದ. ಇದು ಗೊತ್ತಾಗಿ ಗಂಡ ಹೆಂಡತಿ ನಡುವೆ ದೊಡ್ಡ ಜಗಳವೇ ನಡೆಯಿತು. ಈ ಸಂದರ್ಭದ ಸಿಟ್ಟೆದ್ದ ಹೆಂಡತಿ ಗಂಡನ್ನು ಹೊಡೆದು ಕೊಂದಿದ್ದಾಳೆ…

ಮನಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ದೊರೈರಾಜ್ ಎಂದು ಗುರುತಿಸಲಾಗಿದೆ. ಇನ್ನು, ಗಂಡನನ್ನು ಕೊಂದ ಆರೋಪದ ಮೇಲೆ 40 ವರ್ಷದ ಮಹಿಳೆಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

About sudina

Check Also

ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಮಂಗಳೂರು : ಪಣಂಬೂರು ಸಮುದ್ರ ಕಿನಾರೆಯಲ್ಲಿ ಸುಂಟರಗಾಳಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಸಿತ್ತು. ಈ ಸುಂಟರಗಾಳಿಯಿಂದ ಕಡಲ ತೀರದಲ್ಲಿ ಇದ್ದ …

Leave a Reply

Your email address will not be published. Required fields are marked *

error: Content is protected !!