Monday , April 23 2018
Home / News NOW / ಸ್ವಿಮಿಂಗ್​ಪೂಲ್​ನಲ್ಲಿ ಸಿಕ್ಕಾಕ್ಕಿಕೊಂಡ ಮಹಿಳೆ ಫೇಸ್​ಬುಕ್​ ಮೂಲಕ ಬಚಾವ್​ ಆದರು…!

ಸ್ವಿಮಿಂಗ್​ಪೂಲ್​ನಲ್ಲಿ ಸಿಕ್ಕಾಕ್ಕಿಕೊಂಡ ಮಹಿಳೆ ಫೇಸ್​ಬುಕ್​ ಮೂಲಕ ಬಚಾವ್​ ಆದರು…!

ನ್ಯೂಯಾರ್ಕ್​ : ಸಾಮಾಜಿಕ ಜಾಲತಾಣಗಳಿಂದ ಸಹಾಯಕ್ಕಿಂತ ಹೆಚ್ಚು ಅನಾಹುತಗಳೇ ಆಗುವುದು ಜಾಸ್ತಿ ಅನ್ನೋದು ಕೆಲವರ ವಾದ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿವೆ. ಇದೊಂದು ದೊಡ್ಡ ಚರ್ಚೆಗ ವಿಷಯವಾದ್ದರಿಂದ ಈ ವಿಚಾರವನ್ನು ನಾವು ಪಕ್ಕಕ್ಕಿಡುವ. ಆದರೆ, ಈ ಪರ ವಿರೋಧದ ನಡುವೆಯೂ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಿಂದ ಬಚಾವ್ ಆಗಿದ್ದಾರೆ…! ಫೇಸ್​ಬುಕ್​ನಲ್ಲಿ ಹಾಕಿದ ಮೆಸೇಜ್​ನಿಂದ ಇವರು ರಕ್ಷಿಸಲ್ವಟ್ಟಿದ್ದಾರೆ…!

ನಡೆದದ್ದು ಏನು…? : ನ್ಯೂಯಾರ್ಕ್​ನ 61 ವರ್ಷದ ಮಹಿಳೆಯೊಬ್ಬರು ಸ್ವಿಮಿಂಗ್​ ಪೂಲ್​ನಲ್ಲಿ ಈಜಾಡುತ್ತಿದ್ದರು. ಈ ವೇಳೆ, ದೊಡ್ಡ ಏಣಿಯೊಂದು ಇವರ ಮೇಲೆ ಬಿದ್ದಿತ್ತು. ಇದರಿಂದ ಮೇಲೆ ಬರಲಾರದ ಸ್ಥಿತಿಯಲ್ಲಿದ್ದ ಈ ಮಹಿಳೆ ತಕ್ಷಣ ಫೇಸ್​ಬುಕ್​ನಲ್ಲಿ ತಮ್ಮನ್ನು ರಕ್ಷಿಸುವಂತೆ ಒಂದು ಮೆಸೇಜ್ ಮಾಡಿದ್ದಾರೆ. ಇದನ್ನು ಕಂಡ ಅವರ ಸ್ನೇಹಿತರು ತಕ್ಷಣ ಬಂದು ಅವರನ್ನು ರಕ್ಷಣೆ ಮಾಡಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ಇವರು ಸ್ವಿಮ್ಮಿಂಗ್ ಪೂಲ್​ನಲ್ಲೇ ಇದ್ದರು. ಅಕ್ಕ ಪಕ್ಕದಲ್ಲೂ ಯಾರೂ ಇರಲಿಲ್ಲ. ಕರೆ ಮಾಡಿ ತಿಳಿಸುವ ಎಂದರೆ ಫೋನ್ ಕೂಡಾ ಒಳಗಿತ್ತು. ಹೀಗಾಗಿ, ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಕೋಲಿನಿಂದ ಸಹಾಯದಿಂದ ಚೇರ್ ಮೇಲೆ ಇಟ್ಟಿದ್ದ ತನ್ನ ಐಪ್ಯಾಡನ್ನು ಕಷ್ಟಪಟ್ಟು ಎಳೆದ ಅವರು ಫೇಸ್​ಬುಕ್​ನಲ್ಲಿ ಸಂದೇಶ ಹಾಕಿದರು… ಇದನ್ನು ನೋಡಿದ ಸ್ನೇಹಿತರು ಇವರು ಬಂದು ರಕ್ಷಣೆ ಮಾಡಿದರು. ಅಲ್ಲಿಗೆ ಆ ಮಹಿಳೆ ಕೂಡಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Source: Screenshot/nydaily.com

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!