ಇಷ್ಟು ದಿನ ನೀವೆಲ್ಲಾ ಯುವಿ ಅವರನ್ನು ಕ್ರಿಕೆಟಿಗನಾಗಿ ನೋಡಿದ್ದೀರಿ. ಆದರೆ, ನಟನಾಗಿ ನೋಡಿದ್ದೀರಾ…? ಬಹುಶಃ ಇಲ್ಲ… ಕ್ರಿಕೆಟ್ಗೆ ಬರುವುದಕ್ಕೆ ಮುಂಚೆಯೇ ಯುವಿ ನಟನಾಗಿದ್ದರು ಎಂಬ ವಿಷಯ ಹೆಚ್ಚಿನವರಿಗೆ ಗೊತ್ತೇ ಇರಲಿಕ್ಕಿಲ್ಲ…
ಯುವರಾಜ್ ಸಿಂಗ್ ಭಾರತದ ಕ್ರಿಕೆಟ್ ಟೀಂ ಕಂಡಿದ್ದ ಅಪ್ರತಿಮ ಆಟಗಾರ.. ಒಂದು ಕಾಲದಲ್ಲಿ ಯುವಿ ಆಟ ಎಲ್ಲರನ್ನೂ ಸೆಳೆದಿತ್ತು… ಆದರೆ, ನಂತರ ಯುವಿ ಫಾರ್ಮ್ ಕಳೆದುಕೊಂಡಿದ್ದರು… ಟೀಂ ಇಂಡಿಯಾಗೆ ಆಯ್ಕೆ ಆಗುವುದಕ್ಕೆ ಯುವಿ ಹೆಣಗಾಟ ನಡೆಸಿದ್ದೂ ನಿಜ… ಈ ನಡುವೆ, ಕ್ಯಾನ್ಸರ್ನಂತಹ ಮಾರಕ ರೋಗ ಈ ಸುಂದರಾಂಗನನ್ನು ಕಾಡಿತ್ತು… ಆದರೆ, ಧೈರ್ಯ, ಆತ್ಮಸ್ಥೈರ್ಯದಿಂದ ಕ್ಯಾನ್ಸರ್ನಂತ ಕ್ಯಾನ್ಸರ್ನಿಂದಲೇ ಪಾರಾಗಿ ಬಂದವರು ಇವರು…
ಇದೆಲ್ಲಾ ಒತ್ತಟ್ಟಿಗಿರಲಿ. ಈಗ ಈ ಯುವಿ ಬಗ್ಗೆ ನಾವ್ ನಿಮ್ಗೊಂದು ಇಂಟ್ರಸ್ಟಿಂಗ್ ವಿಷ್ಯ ಹೇಳ್ತೀವಿ ಕೇಳಿ… ಅದೇನೆಂದರೆ, ನೀವೆಲ್ಲಾ ಕ್ರಿಕೆಟಿಗನಾಗಿ ಯುವರಾಜ್ ಅವರನ್ನು ನೋಡಿದ್ದೀರಿ. ಆದರೆ, ಅದಕ್ಕಿಂತಲೂ ಮುಂಚೆಯೇ ಯುವಿ ಒಬ್ಬ ನಟನಾಗಿದ್ದರು…!
11 ವರ್ಷ ಇರುವಾಗಲೇ ಯುವಿ ಸಿನೆಮಾವೊಂದಕ್ಕೆ ಬಣ್ಣ ಹಚ್ಚಿದ್ದರು… ಪಂಜಾಬಿಯಲ್ಲಿ ತೆರೆ ಕಂಡಿದ್ದ ಮೆಹಂದಿ ಶಾಘ್ನಾ ದಿ ಎಂಬ ಚಿತ್ರ ಇದು… ಈ ಚಿತ್ರದಲ್ಲಿ ಬಾಲನಟನಾಗಿ ಯುವಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು…! ಈ ಚಿತ್ರ 1992ರಲ್ಲಿ ರಿಲೀಸ್ ಆಗಿತ್ತು… ಆದರೆ, ಯುವಿಗೆ ಅದ್ಯೇಗೆ ಚಿತ್ರದಲ್ಲಿ ನಟಿಸುವ ಛಾನ್ಸ್ ಸಿಕ್ಕಿದ್ದು ಎಂಬು ಪಕ್ಕಾ ನಮಗೆ ಗೊತ್ತಿಲ್ಲ. ಅಲ್ಲೂ ಶಾಲೆಯ ಸ್ಫೋರ್ಟ್ಸ್ನಲ್ಲಿ ಗೆದ್ದು ಟ್ರೋಫಿ ಎತ್ತುವ ಹುಡುಗನ ಪಾತ್ರವನ್ನು ಯುವಿ ನಿರ್ವಹಿಸಿದ್ದರು… ಅಂದು ಚಿತ್ರದಲ್ಲಿ ಈ ರೀತಿಯ ಪಾತ್ರ ಮಾಡಿದ್ದ ಯುವರಾಜ್ ಸಿಂಗ್ ಅವರಿಗೆ ನಿಜ ಜೀವನದಲ್ಲೂ ಇಂತಹದ್ದೇ ಹಲವು ಅನುಭವಗಳು ಆಗಿದ್ದವು… ಕ್ರಿಕೆಟ್ನಲ್ಲಿ ಹಲವು ಟ್ರೋಫಿಗೆ ಯುವಿ ಮುತ್ತಿಕ್ಕಿದ್ದರು…
ಅಂದಿನ ಬಾಲನಟ ಈಗ ದೊಡ್ಡವರಾಗಿದ್ದಾರೆ… ಕ್ರಿಕೆಟ್ ಜಗತ್ತಿನಲ್ಲಿ ಯಶಸ್ಸು, ಟೀಕೆ ಎರಡನ್ನೂ ಕೇಳಿದ್ದಾರೆ… ಕ್ಯಾನ್ಸರ್ನಂತ ಮಾರಕ ರೋಗವನ್ನು ಗೆದ್ದು ಎನ್ಜಿಓ ಜೊತೆ ಕೈ ಜೋಡಿಸಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ… ಇದರೊಂದಿಗೆ ಪ್ರೇಯಸಿ ಹಝೀಲ್ ಕೀಚ್ರನ್ನು ವರಿಸಿ ಸುಖಕರ ದಾಂಪತ್ಯವನ್ನೂ ನಡೆಸುತ್ತಿದ್ದಾರೆ… ಈ ಎಲ್ಲಾ ಕಾರಣದಿಂದ ಯುವಿ ಜೀವನವೂ ಒಂದು ರೀತಿ ಯುವಕರಿಗೆ ಸ್ಫೂರ್ತಿ… ಹೀಗಾಗಿ, ಇವರ ಅಭಿಮಾನಿಗಳು ಯುವಿ ಆತ್ಮಕತೆ ಬರೆಯುವುದನ್ನು ಎದುರು ನೋಡುತ್ತಿದ್ದಾರೆ… ಒಂದೊಮ್ಮೆ ಯುವಿ ಆತ್ಮಕತೆ ಬರೆದರೆ ಅವರ ಜೀವನದ ಇನ್ನಷ್ಟು ಇಂಟ್ರಸ್ಟಿಂಗ್ ವಿಷ್ಯಗಳು ಅಕ್ಷರದ ರೂಪ ಪಡೆಯಲಿವೆ…