ಪಾಟ್ನಾ: ಬಿಹಾರ ಈಗ ಪ್ರವಾಹದಿಂದ ನಲುಗಿದೆ. ಇಲ್ಲಿನ ಜನ ಇನ್ನೂ ಭೀತಿಗೊಂಡಿದ್ದಾರೆ. ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದರಲ್ಲಿ ಈ ಜನ ತೊಡಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಜನರಿಗೆ ಸಹಾಯ ಮಾಡಲು ಬಾಲಿವುಡ್ನ ಹಲವರು ಮುಂದೆ ಬಂದಿದ್ದಾರೆ… ಇದು ಈ ಜನರಿಗೆ ಕೊಂಚ ಆಸರೆ ಆಗಿದೆ…
ಕೊಚ್ಚಿ ಹೋಗುವ ಸೇತುವೆ… ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಸ್ತುಗಳು… ಮನೆ ಮಠ ಇಲ್ಲದೆ ಬೀದಿಗೆ ಬಿದ್ದ ಜನ… ನರಕ ಸದೃಶ್ಯ ಬದುಕು… ಇದು ಬಿಹಾರ ಭೀಕರ ಪ್ರವಾಸದ ದೃಶ್ಯಗಳು… ಒಂದು ವಾರಗಳ ಕಾಲ ಸುರಿದ ಸತತ ಮಳೆ ಇಲ್ಲಿ ಇಂತಹ ಸ್ಥಿತಿ ತಂದಿದೆ. ಮಳೆಯ ಭೀಕರತೆ ಎಂತಹದ್ದು ಎಂಬ ನಿಜ ದರ್ಶನ ಇಲ್ಲಿ ಜನರಿಗಾಗಿದ್ದು, ನಿದ್ದೆಯಲ್ಲೂ ಬೆಚ್ಚಿ ಬೀಳುವಂತಹ ಸ್ಥಿತಿಯಲ್ಲಿ ಇವರೆಲ್ಲಾ ಇದ್ದಾರೆ… ಇದುವರೆಗೆ ಸುಮಾರು 130ಕ್ಕೂ ಹೆಚ್ಚು ಜನರು ಮಳೆಗೆ ಬಲಿಯಾಗಿದ್ದಾರೆ… ಮಳೆಯ ದೆಸೆಯಿಂದ ಸುಮಾರು 16 ಜಿಲ್ಲೆಗಳಲ್ಲಿ 98 ಲಕ್ಷಕ್ಕೂ ಅಧಿಕ ಜನ ಸಂತ್ರಸ್ತರಾಗಿದ್ದಾರೆ…
ಈ ಸಂತ್ರಸ್ತರಿಗಾಗಿ ಇಡೀ ದೇಶ ಮರುಗಿದೆ. ಹಲವರು ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್ ಸ್ಟಾರ್ಗಳು ಕೂಡಾ ಸಂತ್ರಸ್ತರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ತನ್ನ ಮುಂದಿನ ಸೀಕ್ರೆಟ್ ಸೂಪರ್ಸ್ಟಾರ್ ಚಿತ್ರದ ಪ್ರಮೋಷನ್ಗಾಗಿ ಬಂದ ಅಮೀರ್ ಬಿಹಾರ ಸಂತ್ರಸ್ತರಿಗೆ ಎಲ್ಲರೂ ನೆರವಾಗಬೇಕು ಎಂದು ಕರೆ ನೀಡಿದ್ದಾರೆ…
ಇನ್ನೊಂದ್ಕಡೆ, ಉತ್ತರಾಖಂಡ್ನಲ್ಲೂ ಮಳೆ ತನ್ನ ಭೀಕರತೆಯನ್ನು ಪ್ರದರ್ಶಿಸಿದೆ… ಇಲ್ಲಿ ಬಾಲಿವುಡ್ನ ಸೌಂದರ್ಯವತಿ ಊರ್ವಶಿ ರೌಟೇಲಾ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ… ತನ್ನ ಸೌಂದರ್ಯದ ಮೂಲಕವೇ ಮನೆ ಮಾತಾಗಿದ್ದ ಊರ್ವಶಿ ತಕ್ಷಣ ಉತ್ತರಾಖಂಡ್ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ಮೂಲತಃ ಉತ್ತರಾಖಂಡ್ನವರಾದ ಊರ್ವಶಿ ಮುಂಬೈಯಿಂದ ತನ್ನೂರಿಗೆ ಹೋಗಿ ಅಲ್ಲಿ ಅಪ್ಪಟ ಸಾಮಾಜಿಕ ಕಾರ್ಯಕರ್ತೆಯಂತೆ ಸಂತ್ರಸ್ತರ ಪರವಾಗಿ ಕೆಲಸ ಮಾಡಿದ್ದಾರೆ.
ಪ್ರವಾಸ ಪೀಡಿತ ಜನರಿಗೆ ಬಟ್ಟೆ, ಆಹಾರ ನೀಡಿ ಊರ್ವಶಿ ಗಮನ ಸೆಳೆದಿದ್ದಾರೆ. ರೌಟೇಲಾ ಹೃದಯಸ್ಪರ್ಶಿ ಕಾರ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ… ತನ್ನೂರಿನ ಮಗಳ ಸೇವೆಗೆ ಜನರ ಮನಸ್ಸು ಕೂಡಾ ತುಂಬಿ ಬಂದಿದೆ… ಕಷ್ಟದಲ್ಲಿ ಇರುವವರಿಗೆ ನೆರವಾದಾಗ ಸಿಗುವ ಆನಂದವೇ ಬೇರೆ… ಬಾಲಿವುಡ್ ನಟ ಅಮೀರ್ ಖಾನ್ ಈಗಾಗಲೇ ತಮ್ಮ ಪಾನಿ ಫೌಂಡೇಷನ್ನ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕುಡಿಯುವ ನೀರಿನ ಬಗ್ಗೆ ಅಮೀರ್ ಜಾಗೃತಿ ಮೂಡಿಸುತ್ತಿದ್ದಾರೆ. ಪಾನಿ ಫೌಂಡೇಷನ್ನ ಮೂಲಕ ಹಲವು ಸಾಮಾಜಿಕ ಕಾರ್ಯಗಳಾಗಿವೆ.
ಈಗ ಪ್ರವಾಹ ಸಂತ್ರಸ್ತರ ನೆರವಿಗೂ ಇವರು ಮುಂದಾಗಿದ್ದು ಸಂತ್ರಸ್ತರ ಕಷ್ಟ ದೂರ ಮಾಡಲು ನೆರವಾಗಿದೆ. ಇನ್ನು, ಊರ್ವಶಿ ಅವರ ಕಾರ್ಯವೂ ಎಲ್ಲ ಕಡೆಯಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ… ಸ್ಟಾರ್ಗಳು ಈ ರೀತಿಯ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ ಅವರ ಅಭಿಮಾನಿಗಳೂ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತಾರೆ… ಹೀಗಾಗಿ, ನೆರವು ನೀಡುವ ಕೈಗಳ ಸಂಖ್ಯೆ ಅಧಿಕವಾಗುತ್ತದೆ. ಕಷ್ಟದಲ್ಲಿ ಇರುವವರ ದುಃಖದ ದಿನಗಳು ಕಡಿಮೆಯಾಗುತ್ತದೆ…