Wednesday , November 21 2018
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ವಿವಿಧ ವಿದ್ಯಮಾನಗಳ ಒಂದು ನೋಟ…

ಬಂಟ್ವಾಳ : ವಿವಿಧ ವಿದ್ಯಮಾನಗಳ ಒಂದು ನೋಟ…

ಎಸ್​ವಿಎಸ್​ ವಾಣಿಜ್ಯ ಸಂಘ : ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ಜಿಎಸ್​ಟಿ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮನೋಜ್​ ಲೂಯಿಸ್​ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಪ್ರಗತಿಯ ದೃಷ್ಟಿಯಲ್ಲಿ ಜಿಎಸ್​ಟಿ ಬಹಳ ಪರಿಣಾಮಕಾರಿಯಾದುದು. ಇಂದು ನಮಗೆ ಅದು ಹೊರೆಯಂತೆ ಕಂಡರೂ, ಮುಂದಿನ ಭವ್ಯ ಭಾರತದ ನಿರ್ಮಾಣಕ್ಕೆ ಅದು ಸಹಕಾರಿ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ಅಧ್ಯಕ್ಷೆ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಖಿಲಾ ಪೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಚರಿತ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಕು. ಶ್ರೀಲಕ್ಷ್ಮೀ ಭಟ್ ಕಾರ್ಯಕ್ರಮ ನಿರೂಪಿಸಿದರು.

ಲಲಿತ ಕಲಾ ಸಂಘ : ಎಸ್​ವಿಎಸ್​ ಪದವಿ ಪೂರ್ವ ಕಾಲೇಜಿನ ಲಲಿತಾ ಕಲಾ ಸಂಘದ ವತಿಯಿಂದ ರಂಗಭೂಮಿ ಕುರಿತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹೇಶ್ ಕಾಲೇಜಿನ ಉಪನ್ಯಾಸಕ, ಯಕ್ಷಗಾನ ಕಲಾವಿದ ಸುನಿಲ್ ಪಲ್ಲಮಜಲು ಇಲ್ಲಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಯಾವುದಾದರೊಂದು ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಆ ಮೂಲಕವಾಗಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿದ್ದರು. ಲಲಿತ ಕಲಾ ಸಂಘದ ಅಧ್ಯಕ್ಷೆ ಶಾಲಿನಿ ಬಿ. ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಪಲ್ಲವಿ ಪೂಜಾರಿ ಗೋಪಾಲ್ ಸ್ವಾಗತಿಸಿ, ಪ್ರತೀಕ್ಷಾ ಬಿ. ವಂದಿಸಿದರು. ಗ್ರೆನಿಷಾ ಸುಷ್ಮಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು.

ಆಟೋಟ ಸ್ಪರ್ಧೆ : ಪೆರಾಜೆ ಗಣೇಶೋತ್ಸವ ಸಮಿತಿ ಮತ್ತು ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ ನ  ವತಿಯಿಂದ 8ನೇ ವರ್ಷದ ಗಣೇಶ್ ಚತುರ್ಥಿ ಅಂಗವಾಗಿ ಪೆರಾಜೆ ಶಾಲಾ ವಠಾರದಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳನ್ನು  ಪೆರಾಜೆ ಗ್ರಾಮದ ದೈವ ಪಾತ್ರಿ ಚೆನ್ನಪ್ಪ ಗೌಡ ಉದ್ಘಾಟಿಸಿದರು. ಈ ಸಂದರ್ಭ ಕುಲಾಲ ಸಂಘದ ಸ್ಥಾಪಕಾಧ್ಯಕ್ಷರಾದ ಬಿ.ಎಸ್.ಕುಲಾಲ್ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ವಿಜಯ ಬ್ಯಾಂಕಿನ ಮ್ಯಾನೇಜರ್ ಸದಾಶಿವ ಆಚಾರ್ಯ ಮಡಲ ಮತ್ತು ಮಾಣಿ ತಾ.ಪಂ.ಸದಸ್ಯೆ ಮಂಜುಳಾಕುಶಲ ಅವರು ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ್ ಕಾಡೂರು, ಸ್ಥಾಪಕಾಧ್ಯಕ್ಷರಾದ ಹರೀಶ್ ರೈ ಪಾಣುರು, ಕ್ರೀಡಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಸಾದಿಕುಕ್ಕು, ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ಬುಡೋಳಿ, ಟ್ರಸ್ಟನ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಶಾಲಾಭಿವೃದಿ ಸಮಿತಿ ಅಧ್ಯಕ್ಷ ಮೋನಪ್ಪ ಸಾಲಿಯಾನ್, ಟ್ರಸ್ಟ್​​ನ ಸಂಚಾಲಕ ರಾಘವ ಗೌಡ ಉಪಸ್ಥಿರಿದ್ದರು . ಗ್ರಾ.ಪಂ.ಸದಸ್ಯ ಉಮೇಶ್ ಎಂ.ಪಿ.ಸ್ವಾಗತಿಸಿ, ದಿವಾಕರ ಶಾಂತಿಲ ವಂದಿಸಿದರು. ಯತಿರಾಜ್ ಮತ್ತು ಲಕ್ಮೀಶ ಕಾರ್ಯಕ್ರಮ ನಿರೂಪಿದರು.

ವರದಿ : ಯಾದವ್​ ಕುಲಾಲ್​, ಬಿ.ಸಿ.ರೋಡ್​

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!