Saturday , September 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ನದಿ ರಕ್ಷಣೆಗೆ ಸ್ಟಾರ್​ಗಳ ಕರೆ… : ನೀವೂ ಕೈ ಜೋಡಿಸಿ…

ನದಿ ರಕ್ಷಣೆಗೆ ಸ್ಟಾರ್​ಗಳ ಕರೆ… : ನೀವೂ ಕೈ ಜೋಡಿಸಿ…

ಬೆಂಗಳೂರು/ ಮುಂಬೈ : ಮನುಷ್ಯ ಅಭಿವೃದ್ಧಿ ಹೊಂದಿದಂತೆಲ್ಲಾ ಪರಿಸರ ಹಾಳಾಗುತ್ತಿದೆ. ಪರಿಸರದ ಮೇಲೆ ನಾವು ಈಗಾಗಲೇ ಸಾಕಷ್ಟು ಪ್ರಹಾರ ಮಾಡಿದ್ದೇವೆ. ಇನ್ನು ಉಳಿದ ಪರಿಸರವನ್ನು ರಕ್ಷಿಸಬೇಕಾದ ಅನಿವಾರ್ಯತೆ ನಮಗಿದೆ. ಇಂತಹ ಸಂದರ್ಭದಲ್ಲಿ ನದಿ ಉಳಿಸುವ ದೊಡ್ಡ ಅಭಿಯಾನವೊಂದು ಶುರುವಾಗಿದೆ. ಈ ಅಭಿಯಾನಕ್ಕೆ ಸ್ಟಾರ್​ಗಳೆಲ್ಲಾ ಕೈ ಜೋಡಿಸಿದ್ದಾರೆ…

ನದಿಗಳು ನಮ್ಮ ದೇಶದ ದೊಡ್ಡ ಆಸ್ತಿ… ನದಿಯಿಲ್ಲದೆ ನಾವಿಲ್ಲ… ನದಿಗಳೇ ಈ ನಾಗರಿಕತೆಯ ಮೂಲ… ಆದರೆ, ನಾಗರಿಕರಾದ ನಾವು ನದಿಗಳನ್ನು ಅವುಗಳ ಮೂಲ ಸ್ಥಿತಿಯಲ್ಲೇ ಉಳಿಸಿಕೊಂಡಿದ್ದೇವಾ…? ನಿಜವಾಗಿಯೂ ಇಲ್ಲ… ಅದೆಷ್ಟೋ ನದಿಗಳು ನಮ್ಮಲ್ಲಿ ಅವಸಾನದ ಅಂಚಿನಲ್ಲಿವೆ… ಗಂಗಾನದಿಯಂತೂ ಶುದ್ಧವೇ ಮಾಡದಷ್ಟು ಮಲಿನವಾಗಿದೆ… ಪಕೃತಿ ನೀಡುವ ಅಪೂರ್ವ ಸಂಪತ್ತನ್ನು ಉಳಿಸಬೇಕಾಗಿದ್ದು ನಮ್ಮ ಕರ್ತವ್ಯ. ಆದರೆ, ಈ ಕರ್ತವ್ಯವನ್ನು ನಾವು ಖಂಡಿತವಾಗಿಯೂ ಪಾಲಿಸುತ್ತಿಲ್ಲ. ಹೀಗಾಗಿ, ನದಿಗಳೂ ಹಾಳಾಗುತ್ತಿವೆ…

ಇನ್ನೂ ಹೆಚ್ಚು ದಿನ ಇಂತಹ ಸ್ಥಿತಿ ಇರಬಾರದು ಎಂಬ ಕಾರಣಕ್ಕೆ ಒಂದು ಅಭಿಯಾನವೊಂದು ಶುರುವಾಗಿದೆ. ದೇಶಾದ್ಯಂತ ಇರುವ ನದಿಯನ್ನು ಉಳಿಸುವ ಅಭಿಯಾನ ಅದು. ಈ ಅಭಿಯಾವನ್ನು ಮೊದಲು ಆರಂಭಿಸಿದ್ದು ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್​​​… ರ್ಯಾಲಿ ಫಾರ್ ರಿವರ್​ ಎಂಬ ಅಭಿಯಾನ ಇದು. ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದ ವರೆಗಿನ ಅಭಿಯಾನ ಇದು. ಈ ಅಭಿಯಾನಕ್ಕೆ ಈಗ ಸ್ಟಾರ್​ಗಳು ಕೈ ಜೋಡಿಸಿದ್ದಾರೆ… ಬಾಲಿವುಡ್​ ನಟ ಸಲ್ಮಾನ್ ಖಾನ್​​ ದೊಡ್ಡ ಧ್ವನಿಯಲ್ಲೇ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಇರುವ ನದಿಗಳನ್ನು ಉಳಿಸಲು ಸಲ್ಲೂ ಕರೆ ಕೊಟ್ಟಿದ್ದಾರೆ. ಅಲ್ಲದೆ, ಟ್ವಿಟರ್​ನಲ್ಲಿ ತಮ್ಮದೊಂದು ವೀಡಿಯೋ ಕೂಡಾ ಅಪ್​ಲೋಡ್ ಮಾಡಿದ್ದಾರೆ.


ಕಾವೇರಿ, ಗಂಗಾ, ಯಮುನಾ, ಕೃಷ್ಣಾ ನದಿಗಳು ನಮ್ಮ ಜೀವನಾಡಿ. ಸಾವಿರಾರು ವರ್ಷಗಳಿಂದ ಈ ನದಿಗಳು ನಮ್ಮನ್ನು ಪೋಷಿಸಿವೆ. ಆದರೆ, ಮನುಷ್ಯ ಸಂಬಂಧಿ ಚಟುವಟಿಕೆಗಳಿಂದ ಈ ನದಿಗಳು ಬತ್ತಿ ಹೋಗುತ್ತಿದ್ದು, ಅವುಗಳನ್ನೆಲ್ಲಾ ನಾವು ಉಳಿಸಬೇಕು ಎಂದು ವೀಡಿಯೋದಲ್ಲಿ ಕರೆ ನೀಡಿರುವ ಸಲ್ಲೂ ಸಮಾರಂಭವೊಂದರಲ್ಲಿ ತಮ್ಮ ಅಭಿಮಾನಿಗಳಿಗೆ ಇದೇ ರೀತಿಯ ಕರೆ ನೀಡಿದ್ದಾರೆ…

ಈ ದೊಡ್ಡ ಅಭಿಯಾನಕ್ಕೆ ಬಾಲಿವುಡ್​ನ ಇತರ ನಟರಾದ ರಿಷಿ ಕಪೂರ್, ಅನುಪಮ್​ ಖೇರ್​, ಅರ್ಬಜ್​ ಖಾನ್​ ಸೇರಿದಂತೆ ಹಲವರು ಬೆಂಬಲ ನೀಡಿದ್ದಾರೆ…

ಇನ್ನು, ಸ್ಯಾಂಡಲ್​ವುಡ್​ನಲ್ಲೂ ಈ ಅಭಿಯಾನಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಹಲವರು ಈ ಅಭಿಯಾನಕ್ಕೆ ಕೈ ಜೋಡಿಸಿ ಹೋರಾಟವನ್ನು ಇನ್ನಷ್ಟು ಬಲಗೊಳಿಸಿದ್ದಾರೆ. ನಟ. ನಿರ್ದೇಶಕ ರಕ್ಷಿತ್​ ಶೆಟ್ಟಿ ಕೂಡಾ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದು, ಈ ಹೋರಾಟದಲ್ಲಿ ಭಾಗಿಯಾಗಲು 8000980009 ನಂಬರ್​ಗೆ ಮಿಸ್​ ಕಾಲ್​​ ಕೊಡಲು ಮನವಿ ಮಾಡಿಕೊಂಡಿದ್ದಾರೆ…

ಇನ್ನು, ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಕೂಡಾ ಈ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಖಂಡಿತಾ ಇಂತಹದ್ದೊಂದು ಅಭಿಯಾನ ಬೇಕಾಗಿತ್ತು… ಫಿಲಂ ಸ್ಟಾರ್​ಗಳೂ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದರಿಂದ ಅವರ ಅಭಿಮಾನಿಗಳೂ ಈಗ ನದಿ ರಕ್ಷಣೆಗೆ ಮುಂದೆ ಬಂದಿದ್ದಾರೆ. ಈ ಮೂಲಕ ದೇಶ ದೊಡ್ಡ ಮಟ್ಟದ ಆಂದೋಲನವೊಂದರಲ್ಲಿ ಭಾಗಿಯಂತಾಗಿದೆ… ಖಂಡಿತಾ ಇದೊಂದು ಹೆಮ್ಮೆಯ ಮತ್ತು ಮಾದರಿಯ ಅಭಿಯಾನವಾಗಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!