Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಪ್ರಿಯತಮನ ಬಗ್ಗೆ ಕೊನೆಗೂ ಬಾಯ್ಬಿಟ್ಟ ಇಲಿಯಾನಾ…

ಪ್ರಿಯತಮನ ಬಗ್ಗೆ ಕೊನೆಗೂ ಬಾಯ್ಬಿಟ್ಟ ಇಲಿಯಾನಾ…

ಮುಂಬೈ : ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ಇಲಿಯಾನಾ ಬಾಲಿವುಡ್​ನಲ್ಲೂ ಹೆಸರು ಮಾಡಲು ಹೊರಟಿದ್ದಾರೆ. ಆದರೆ, ಬಾಲಿವುಡ್​ನಲ್ಲಿ 2012ರಲ್ಲಿ ರಿಲೀಸ್ ಆದ ಬರ್ಫಿ ಚಿತ್ರ ಮಾತ್ರ ಇಲಿಯಾನಾಗೆ ಹೆಸರು ತಂದು ಕೊಟ್ಟಿತ್ತು. ಆ ಬಳಿಕ ಹೇಳಿಕೊಳ್ಳುವಂತಹ ಸಕ್ಸಸ್​​​​ ಇಲಿಯಾನಾಗೆ ಸಿಗಲಿಲ್ಲ. ಹಾಗಂತ, ಇವರು ಸುದ್ದಿಯಾಗುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಸಿನೆಮಾಕ್ಕಿಂತಲೂ ಬಾಲಿವುಡ್​ನಲ್ಲಿ ಇಲಿಯಾನಾ ತನ್ನ ಲವ್​ ಲೈಫ್​ ವಿಚಾರದಲ್ಲಿ ಸುದ್ದಿಯಾಗಿದ್ದೇ ಹೆಚ್ಚು…

ಆದರೆ, ಇಲಿಯಾನಾಗೆ ತನ್ನ ಲವ್​ ಲೈಫ್ ಬಗ್ಗೆ ಮುಚ್ಚಿಡಲು ಇಷ್ಟ ಇಲ್ಲ. ನಾವಿಬ್ಬರು ಸ್ನೇಹಿತರು ಎಂಬ ಟ್ಯಾಗ್​ನಲ್ಲಿ ಪ್ರೀತಿ ಮಾಡುವುದರಲ್ಲಿ ಇಲಿಯಾನಾಗೆ ಸಮ್ಮತಿ ಇಲ್ಲ. ಹೀಗಾಗಿ, ತನ್ನ ಪ್ರಿಯತಮನ ಬಗ್ಗೆ ಇಲಿಯಾನಾ ಬಾಯ್ಬಿಟ್ಟಿದ್ದಾರೆ.

ಇಲಿಯಾನಾ ಆಸ್ಟ್ರೇಲಲಿಯಾದ ಫೋಟೋಗ್ರಾಫರ್​ ಆಂಡ್ರೋ ನೀಬೋ ಅವರೊಂದಿಗೆ ಪ್ರೀತಿಗೆ ಬಿದ್ದಿದ್ದಾರೆ. ವೃತ್ತಿಯಲ್ಲಿ ಅದ್ಭುತ ಫೋಟೋಗ್ರಾಫರ್​ ಆಗಿರುವ ಆಂಡ್ರೋ ಜೊತೆಗಿನ ಫೋಟೋವನ್ನು ಇಲಿಯಾನಾ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ತನ್ನ ಪ್ರೀತಿಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!