Saturday , October 20 2018
ಕೇಳ್ರಪ್ಪೋ ಕೇಳಿ
Home / Gulf News / ಕ್ಯಾಬ್​ ಚಾಲಕರ ಪ್ರಾಮಾಣಿಕತೆ, ಸೇವಾ ಮನೋಭಾವಕ್ಕೆ ಹೃದಯಸ್ಪರ್ಶಿ ಗೌರವ

ಕ್ಯಾಬ್​ ಚಾಲಕರ ಪ್ರಾಮಾಣಿಕತೆ, ಸೇವಾ ಮನೋಭಾವಕ್ಕೆ ಹೃದಯಸ್ಪರ್ಶಿ ಗೌರವ

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಒಳ್ಳೆಯ ಕೆಲಸ ಮಾಡಿದಾಗ ಶಹಬ್ಬಾಸ್​ ಹೇಳಲೇಬೇಕು. ಈ ಮೆಚ್ಚುಗೆಯ ನುಡಿ ಇನ್ನಷ್ಟು ಒಳ್ಳೆಯ ಕೆಲಸಕ್ಕೆ ಪ್ರೇರಣೆಯಾಗುತ್ತದೆ. ಅಂತೆಯೇ ಇಲ್ಲಿನ ರೋಡ್​ ಆಂಡ್​ ಟ್ರಾನ್ಸ್​ಪೋರ್ಟ್​ ಅಥಾರಿಟಿ (ಆರ್​ಟಿಎ)ಇಬ್ಬರು ಕ್ಯಾಬ್​ ಡ್ರೈವರ್​ಗಳನ್ನು ಗೌರವಿಸಿದೆ. ಇದರಲ್ಲಿ ಒಬ್ಬರು ತನ್ನ ಕ್ಯಾಬ್​ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದರೆ, ಮತ್ತೊಬ್ಬರು ಉತ್ತಮ ನಡುವಳಿಕೆಯಿಂದ ವಿಕಲಚೇತನ ವೃದ್ಧರೊಬ್ಬರಿಂದ ಮೆಚ್ಚುಗೆ ಗಳಿಸಿದವರು. ಈ ಇಬ್ಬರನ್ನೂ ಕರೆದು ಸನ್ಮಾನಿಸಿದ ಆರ್​ಟಿಎ.


ಆರ್​ಟಿಎ ಮುಖ್ಯಸ್ಥ ಅಬ್ದುಲ್ಲಾ ಅಲ್​​​​ ಮಹ್ರಿ ಈ ಇಬ್ಬರು ಚಾಲಕರನ್ನು ಗೌರವಿಸಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ… ‘ಒಬ್ಬರು ವಿಕಲ ಚೇತನ ವೃದ್ಧೆಯೊಬ್ಬರು ನಮ್ಮ ಕಾಲ್​ ಸೆಂಟರ್​ಗೆ ಕರೆ ಮಾಡಿ ತಾನು ತಲುಪಬೇಕಾಗಿದ್ದ ಸ್ಥಳಕ್ಕೆ ಚಾಲಕ ಮಹಮ್ಮದ್​ ಕಾಸೀಫ್​​​ ತನ್ನನ್ನು ಸುರಕ್ಷಿತವಾಗಿ ಬಿಟ್ಟಿದ್ದೂ ಅಲ್ಲದೆ, ಒಳ್ಳೆಯ ನಡವಳಿಕೆ ಮತ್ತು ಉತ್ತಮ ಸೇವೆಯಿಂದ ನನ್ನ ಮನ ಸೆಳೆದಿದ್ದಾರೆ ಎಂದು’ ನಮಗೆ ಕರೆ ಮಾಡಿ ತಿಳಿಸಿದರು. ತಾನು ತಲುಪಬೇಕಾಗಿದ್ದ ಸ್ಥಳಕ್ಕೆ ಸೇರಿದ ತಕ್ಷಣ ಅವರು ಕರೆ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ ಎಂದು ಮಹ್ರಿ ತಿಳಿಸಿದ್ದಾರೆ…

ಇನ್ನೋರ್ವ ಕ್ಯಾಬ್​ ಚಾಲಕ ಅಬ್ದುಲ್​ ರಹೀಮ್​​ ಫದಾಲ್​​​ ಅವರು ಪ್ರಾಮಾಣಿಕತೆಯ ಮೂಲಕ ಗಮನ ಸೆಳೆದಿದ್ದಾರೆ. ಇವರು ತಮ್ಮ ವಾಹನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣ, ವರ್ಸ್​ ಮತ್ತು ಅಗತ್ಯ ಕಾರ್ಡ್​​ಗಳನ್ನು ಹಿಂದಿರುಗಿಸಿದ್ದರು. ರಹೀಮ್ ಈ ಪ್ರಾಮಾಣಿಕತೆಯನ್ನು ಆ ಪ್ರಯಾಣಿಕರು ಕೊಂಡಾಡಿದ್ದರು. ಹೀಗಾಗಿ, ರಹೀಮ್ ಅವರನ್ನೂ ನಾವು ಗೌರವಿಸುತ್ತಿದ್ದೇವೆ ಎಂದು ಮಹ್ರಿ ಹೇಳಿದ್ದಾರೆ.

ಖಂಡಿತಾ ಇವರಿಬ್ಬರು ಮಾದರಿಯಾಗಿದ್ದಾರೆ. ಇವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಗೆ ಎಲ್ಲರೂ ತಲೆ ಬಾಗಿದ್ದಾರೆ…

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!