Monday , August 20 2018
ಕೇಳ್ರಪ್ಪೋ ಕೇಳಿ
Home / Film News / Kollywood / ಡೆಡ್ಲಿ ಬ್ಲೂವೇಲ್​​ ಗೇಮ್​​ಗೆ ಖ್ಯಾತ ನಟಿಯ ಸ್ನೇಹಿತ ಬಲಿ…!

ಡೆಡ್ಲಿ ಬ್ಲೂವೇಲ್​​ ಗೇಮ್​​ಗೆ ಖ್ಯಾತ ನಟಿಯ ಸ್ನೇಹಿತ ಬಲಿ…!

ಚೆನ್ನೈ : ಬ್ಲೂವೇಲ್​ ಎಂಬ ಮಾರಕ ಇಂಟರ್​ವೆಟ್​ ಆಟ ಈಗಾಗಲೇ ಭಾರತಕ್ಕೂ ಕಾಲಿಟ್ಟು ಹಲವು ಜೀವ ಬಲಿತೆಗೆದುಕೊಂಡಿದೆ. ಮುಂಬೈಯಲ್ಲಿ ಮೊನ್ನೆ ಬಾಲಕನೊಬ್ಬ ಇದೇ ಆಟದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಇದೇ ರೀತಿಯ ನೋವಿನ ಅನುಭವ ತಮಿಳಿನ ಖ್ಯಾತ ನಟಿ ಐಶ್ವರ್ಯ ರಾಜೇಶ್​ಗೆ ಆಗಿದೆ.

ಐಶ್ವರ್ಯ ರಾಜೇಶ್​​​​​ ಸಹೋದರನ ಆಪ್ತ ಸ್ನೇಹಿತ ಮತ್ತು ಇವರ ಕುಟುಂಬಕ್ಕೂ ತುಂಬಾ ಹತ್ತಿರವಾಗಿದ್ದ ಹುಡುಗನೊಬ್ಬ ಈ ಮಾರಕ ಆಟದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ವತಃ ಐಶ್ವರ್ಯ ಅವರೇ ಈ ವಿಷಯವನ್ನು ದೃಢಪಡಿಸಿದ್ದಾರೆ. ‘ಹೌದು ಇದು ನಿಜ. ನನ್ನ ಸಹೋದರ ಸ್ನೇಹಿತ ಮತ್ತು ನಮ್ಮ ಕುಟುಂಬದ ಸ್ನೇಹಿತ ಇನ್ನಿಲ್ಲ. ಆತನಿಗೆ ಬರೀ 23 ವರ್ಷ ವಯಸ್ಸಾಗಿತ್ತು. ಇಂತಹ ಸನ್ನಿವೇಶಕ್ಕೆ ನಾವು ಸಾಕ್ಷಿಯಾಗುವುದು ತುಂಬಾ ನೋವಿನ ಸಂಗತಿ. ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್​ ಫೋನ್​ಗಳು ನಮ್ಮ ಬದುಕಿನ ಭಾಗವಾಗಿದೆ. ಆದರೆ, ಇವುಗಳನ್ನು ಇತಿ ಮಿತಿಯಲ್ಲಿ ಬಳಸಿಕೊಳ್ಳಬೇಕು’ ಎಂದು ಐಶ್ವರ್ಯ ರಾಜೇಶ್ ಹೇಳಿದ್ದಾರೆ…

read alsoಡೆಡ್ಲಿ ಬ್ಲೂವೇಲ್​ ಗೇಮ್​ಗೆ ಬಾಲಕಿಯರಿಬ್ಬರು ಬಲಿ : ಇಲ್ಲಿದೆ ಭಯಾನಕ ವೀಡಿಯೋ

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!