Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸೈಫ್​, ಅಮೃತಾ ಸಿಂಗ್ ಹಳೇ ಫೋಟೋ ಈಗ ವೈರಲ್ ಆಗುತ್ತಿದೆ…! : ಕಾರಣ ಕೇಳಿದ್ರೆ ನಿಮ್ಗೆ ಅಚ್ಚರಿ ಆಗಬಹುದು…!

ಸೈಫ್​, ಅಮೃತಾ ಸಿಂಗ್ ಹಳೇ ಫೋಟೋ ಈಗ ವೈರಲ್ ಆಗುತ್ತಿದೆ…! : ಕಾರಣ ಕೇಳಿದ್ರೆ ನಿಮ್ಗೆ ಅಚ್ಚರಿ ಆಗಬಹುದು…!

ಮುಂಬೈ : ಈ ಇಂಟರ್​ನೆಟ್​, ಸಾಮಾಜಿಕ ಜಾಲತಾಣಗಳೇ ಹಾಗೆ… ಹಳೇ ಫೋಟೋಗಳು ಯಾವಾಗ ಮೇಲೆ ಬರುತ್ತವೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿ ಸೈಫ್ ಮತ್ತು ಅವರ ಮಾಜಿ ಪತ್ನಿ ಅಮೃತಾ ಸಿಂಗ್​ ಅವರ ಅಪರೂಪದ ಫೋಟೋ. ಈ ಫೋಟೋ ಈಗ ವೈರಲ್ ಆಗಿದೆ…

ಸೈಫ್ ಮತ್ತು ಅಮೃತಾ ಸಿಂಗ್​ ಮದುವೆ ಕತೆಯೇ ರೋಚಕ. ಖ್ಯಾತಿಯ ಉತ್ತುಂಗದಲ್ಲಿ ಇರುವಾಗಲೇ ಅಮೃತಾ ಸಿಂಗ್ ತನಗಿಂತ ಒಂದಷ್ಟು ವರ್ಷ ಕಿರಿಯರಾಗಿದ್ದ ಸೈಫ್​ರನ್ನು ಮದುವೆ ಆಗಿದ್ದರು. ದಾಂಪತ್ಯಕ್ಕಾಗಿ ತಾನು ಉತ್ತುಂಗದಲ್ಲಿದ್ದ ಸಿನಿರಂಗವನ್ನೇ ತ್ಯಜಿಸಿದ್ದರು. ಆದರೆ, ನಂತರ ದಿನಗಳಲ್ಲಿ ಈ ಜೋಡಿ ದೂರವಾಗಿತ್ತು. ಇದೀಗ ಸೈಫ್​ ಕರೀನಾ ಕಪೂರ್​ರನ್ನು ವರಿಸಿ ಒಂದು ಮಗುವಿನ ತಂದೆ ಕೂಡಾ ಆಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಸೈಫ್ ಮತ್ತು ಅಮೃತಾ ಸಿಂಗ್ ಅವರ ಮದುವೆ ಸಂದರ್ಭದ ಅಪರೂಪದ ಈ ಫೋಟೋ ವೈರಲ್ ಆಗಿದೆ. ಅದಕ್ಕೆ ಕಾರಣ, ಅಮೃತಾ ಸಿಂಗ್ ಅವರ ಮೂಗುತಿ…!

ಈ ಫೋಟೋದಲ್ಲಿ ಅಮೃತಾ ರಾಯಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅಮೃತಾ ಅವರ ಮೂಗುತಿ ಈಗ ಸೌಂಡ್ ಮಾಡುತ್ತಿದೆ.. ಈ ಮೂಗುತಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​​ನ ವಸ್ತುವೂ ಆಗಿದೆ…!

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!