Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Mollywood / ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟಿ ಕಾವ್ಯಾ ಮಾಧವನ್​ಗೆ ಸಂಕಷ್ಟ…?

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟಿ ಕಾವ್ಯಾ ಮಾಧವನ್​ಗೆ ಸಂಕಷ್ಟ…?

ತಿರುವನಂತಪುರಂ : ಬಹುಭಾಷಾ ನಟಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಖ್ಯಾತ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್​ಗೂ ಈಗ ಸಂಕಷ್ಟ ಎದುರಾಗಿದೆ. ನನ್ನ ಬಗ್ಗೆ ನಟಿ ಕಾವ್ಯಾಗೆ ಚೆನ್ನಾಗಿ ಗೊತ್ತಿದೆ ಎಂದು ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಪಲ್ಸರ್​ ಸುನಿ ಹೇಳಿದ್ದಾನೆ. ಇದು ಕಾವ್ಯಾಗೆ ಸಂಕಷ್ಟಕ್ಕೆ ತರುವ ಸಾಧ್ಯತೆ ಇದೆ.

ಯಾಕೆಂದರೆ, ಈ ಹಿಂದೆ ಮಾತನಾಡಿದ್ದ ಕಾವ್ಯಾ, ನನಗೆ ಪಲ್ಸರ್ ಸುನಿ ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ಸುನಿ, ಕಾವ್ಯಾಗೆ ನಾನು ಯಾರೆಂದು ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾನೆ. ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಸುನಿ ಮೇಡಂ ಮೇಡಂ ಎಂದು ಒಂದು ಹೆಸರು ಹೇಳುತ್ತಿದ್ದ. ಆ ಮೇಡಂ ಇದೇ ಕಾವ್ಯಾ ಮಾಧವನ್​. ಆದರೆ, ಕಾವ್ಯಾಗೆ ಈ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರು ನನಗೆ ಹಣ ಅಷ್ಟೇ ನೀಡುತ್ತಿದ್ದರೂ ಎಂದೂ ಸುನಿ ಹೇಳಿದ್ದಾನೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!