Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅತ್ಯಧಿಕ ಸಂಭಾವನೆ ಪಡೆಯುವ ಬಾಲಿವುಡ್​ ನಟರು ಯಾರು…? ಪೋಬ್ಸ್​ ಪಟ್ಟಿಯಲ್ಲಿದ್ದಾರೆ ಮೂವರು ಸ್ಟಾರ್ಸ್​​…!
Theater lights out of focus background high resolution photo

ಅತ್ಯಧಿಕ ಸಂಭಾವನೆ ಪಡೆಯುವ ಬಾಲಿವುಡ್​ ನಟರು ಯಾರು…? ಪೋಬ್ಸ್​ ಪಟ್ಟಿಯಲ್ಲಿದ್ದಾರೆ ಮೂವರು ಸ್ಟಾರ್ಸ್​​…!

ನವದೆಹಲಿ : 2017ರಲ್ಲಿ ವಿಶ್ವ ಸಿನೆಮಾದಲ್ಲಿ ಅತ್ಯಧಿಕ ಸಂಭಾವನೆ ಪಡೆದ 20 ನಟರ ಪಟ್ಟಿಯನ್ನು ಪೋಬ್ಸ್ ಮಾಡಿದೆ. ಇದರಲ್ಲಿ ಬಾಲಿವುಡ್​ನ ಮೂವರು ಸ್ಟಾರ್​ಗಳು ಸೇರಿದ್ದಾರೆ. ಅವರೇ, ಶಾರೂಖ್​ ಖಾನ್​, ಸಲ್ಮಾನ್​ ಖಾನ್ ಮತ್ತು ಅಕ್ಷಯ್​ ಕುಮಾರ್​…

ಇನ್ನು, ಅಮೀರ್ ಖಾನ್ ಈ ಪಟ್ಟಿಯಲ್ಲಿ ಇಲ್ಲ. ಅಮೀರ್ ಅಭಿನಯದ ದಂಗಲ್​​ 2016ರಲ್ಲಿ ರಿಲೀಸ್​​​ ಆಗಿತ್ತು. ಈ ಚಿತ್ರ ಈಗಲೂ ಅತ್ಯಧಿಕ ಗಳಿಕೆ ಮಾಡಿದ ಭಾರತದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೂ ಅಮೀರ್​ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಶಾರೂಖ್​, ಸಲ್ಮಾನ್ ಮತ್ತು ಅಕ್ಷಯ್ ಪ್ರತಿವರ್ಷ ಪೋಬ್ಸ್ ಪಟ್ಟಿಯಲ್ಲಿ ಇರುತ್ತಾರೆ. ಸತತ ಮೂರು ವರ್ಷದಿಂದ ಈ ಮೂವರು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಕಳೆದ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಬಿಗ್​ಬಿ ಅಮಿತಾಭ್ ಮಾತ್ರ ಈ ಬಾರಿ ಅವಕಾಶ ವಂಚಿತರಾಗಿದ್ದಾರೆ.

ಈ ವಿಶ್ವದ 20 ನಟರ ಪಟ್ಟಿಯಲ್ಲಿ ಶಾರೂಖ್​ 8 ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಕೂಡಾ ಶಾರೂಖ್​ ಇದೇ ಸ್ಥಾನದಲ್ಲಿದ್ದರು. ಅಕ್ಷಯ್​ ಕುಮಾರ್​ 10ನೇ ಸ್ಥಾನದಲ್ಲಿದ್ದರೆ, ಸಲ್ಮಾನ್​ಗೆ 14ನೇ ಸ್ಥಾನಕ್ಕೆ ಖುಷಿ ಪಟ್ಟಿದ್ದಾರೆ. ಈ ಪಟ್ಟಿಯಲ್ಲಿ ಹಾಲಿವುಡ್ ಸ್ಟಾರ್ ಮಾರ್ಕ್​ ವೇಲ್ಬರ್ಗ್​​ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು, ಜಾಕಿ ಜಾನ್​ ಟಾಪ್​ 5ರೊಳಗೆ ಇದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!