Sunday , October 21 2018
ಕೇಳ್ರಪ್ಪೋ ಕೇಳಿ
Home / News NOW / ಜೈಲಿನಲ್ಲಿದ್ದಾಗಲೇ ಹೊಸೂರಿನ ಎಂಎಲ್ಎ ಮನೆಗೆ ಹೋಗಿದ್ದರಂತೆ ಶಶಿಕಲಾ…!

ಜೈಲಿನಲ್ಲಿದ್ದಾಗಲೇ ಹೊಸೂರಿನ ಎಂಎಲ್ಎ ಮನೆಗೆ ಹೋಗಿದ್ದರಂತೆ ಶಶಿಕಲಾ…!

ಬೆಂಗಳೂರು : ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸುದ್ದಿ ಹಳೆಯದ್ದು. ಆದರೆ, ಈ ಆರೋಪವನ್ನು ಬಗೆಯುತ್ತಾ ಹೋದರೆ ಒಂದೊಂದೇ ವಿಷಯಗಳು ಹೊರಗೆ ಬರುತ್ತಲೇ ಇವೆ. ಸದ್ಯ ಹೊಸದಾಗಿ ಮೇಲೆ ಬಂದಿರುವ ವಿಷಯ ಏನಪ್ಪಾ ಅಂದರೆ ಜೈಲಿನಲ್ಲಿದ್ದಾಗಲೇ ಶಶಿಕಲಾ ಪರಪ್ಪನ ಅಗ್ರಹಾರಕ್ಕೆ ಹತ್ತಿರದಲ್ಲೇ ಇರುವ ಹೊಸೂರಿನ ಶಾಸಕರ ಮನೆಗೆ ಹೋಗಿದ್ದರಂತೆ…! ಹೀಗಂತ, ಡಿಐಜಿ ರೂಪಾ ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ರೂಪಾ ಈ ಮಾಹಿತಿ ನೀಡಿದ್ದಾರೆ. ಹೊಸೂರಿಗೆ ಸಮೀಪದಲ್ಲೇ ಪರಪ್ಪನ ಅಗ್ರಹಾರ ಇದೆ. ಹೀಗಾಗಿ, ಇಲ್ಲಿನ ಶಾಸಕರ ಮನೆಗೆ ಶಶಿಕಲಾ ಹೋಗಿ ಬರುತ್ತಿದ್ದರು. ಆದರೆ, ಜೈಲಿನ ಅಧಿಕಾರಿಗಳು ಗೃಹ ಮಂತ್ರಿ ಮತ್ತು ಗೃಹ ಇಲಾಖೆಗೆ ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಜೈಲಿನ ಗೇಟ್ 1 ಮತ್ತು ಗೇಟ್ 2 ರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಗಳಿಂದ ಶಶಿಕಲಾ ಜೈಲಿನಿಂದ ಹೊರ ಹೋಗಿದ್ದು ಗೊತ್ತಾಗುತ್ತದೆ ಎಂದು ರೂಪಾ ಹೇಳಿದ್ದಾಗಿ ವರದಿ ಆಗಿದೆ…

ಶಶಿಕಲಾ ಜೈಲಿನಲ್ಲಿ ಕೈದಿಯಂತೆ ಇಲ್ಲ. ಇವರಿಗೆ ಇಲ್ಲಿ ವಿಐಪಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಅದೂ ಅಲ್ಲದೆ, ಶಶಿಕಲಾ ಬುರ್ಖಾ ಧರಿಸಿಕೊಂಡು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಶಾಪಿಂಗ್ ಕೂಡಾ ಮಾಡಿದ್ದರು ಎಂದು ಈ ಹಿಂದೆ ವರದಿ ಆಗಿತ್ತು…

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!