Friday , October 19 2018
ಕೇಳ್ರಪ್ಪೋ ಕೇಳಿ
Home / Sandalwood / ಹೊಳಪು ಕಂಗಳ ಈ ಖ್ಯಾತ ನಟ ಕುರುಕ್ಷೇತ್ರದ ಅರ್ಜುನ…

ಹೊಳಪು ಕಂಗಳ ಈ ಖ್ಯಾತ ನಟ ಕುರುಕ್ಷೇತ್ರದ ಅರ್ಜುನ…

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್​ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್ ಈಗ ನಡೆಯುತ್ತಿದೆ. ಎಲ್ಲಾ ಪಾತ್ರಗಳು ಅಂ ತಿಮವಾಗಿದ್ದರೂ ಅರ್ಜುನನ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಜನರ  ಮನಸ್ಸಿನಲ್ಲಿ ಹಾಗೆಯೇ ಇತ್ತು. ಇದೀಗ ಈ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಹೊಳಪು ಕಂಗಳ ಅರ್ಜುನ ಚಿತ್ರಕ್ಕೆ ಸಿಕ್ಕಿದ್ದಾರೆ…

ಹೌದು, ಖ್ಯಾತ ನಟ ಸೋನು ಸೂದ್​​​​​ ಕುರುಕ್ಷೇತ್ರಕ್ಕೆ ಅರ್ಜುನನಾಗಲಿದ್ದಾರೆ. ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರದಲ್ಲಿ ಅಭಿನಯಿಸಿದ್ದ ಸೋನು ಸೂದ್​ ಕುರುಕ್ಷೇತ್ರದ ಅರ್ಜುನ ಪಾತ್ರದ ಮೂಲಕ ಮತ್ತೆ ಸ್ಯಾಂಡಲ್​ವುಡ್​ಗೆ ಮರಳುತ್ತಿದ್ದಾರೆ.  ದಕ್ಷಿಣ ಭಾರತದ ಸಿನೆಮಾರಂಗ ಸೋನುಸೂದ್​ಗೆ ಹೊಸದಲ್ಲ. ತಮಿಳು, ತೆಲುಗಿನಲ್ಲಿ ಸೋನು ಸೂದ್ ಅವರದ್ದು ದೊಡ್ಡ ಹೆಸರು. ತೆಲುಗಿನ ಆರುಂಧತಿ ಚಿತ್ರವಂತೂ ಸೋನುಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ಇಲ್ಲಿ ಅಘೋರಿ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. ಇವರು ನಿರ್ವಹಿಸಿದ್ದ ಪಾತ್ರ ಈಗಲೂ ಸಖತ್​ ಫೇಮಸ್​​​..

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!