Tuesday , November 20 2018
ಕೇಳ್ರಪ್ಪೋ ಕೇಳಿ
Home / Sandalwood / ಟಾಲಿವುಡ್​ನಲ್ಲಿ ಮತ್ತೆ ಕಿಚ್ಚನ ಹವಾ…

ಟಾಲಿವುಡ್​ನಲ್ಲಿ ಮತ್ತೆ ಕಿಚ್ಚನ ಹವಾ…

ಬೆಂಗಳೂರು : ಕಿಚ್ಚ ಸುದೀಪ್ ಈಗ ಮತ್ತೆ ಟಾಲಿವುಡ್​ನಲ್ಲಿ ಮಿಂಚಲು ಹೊರಟಿದ್ದಾರೆ. ಮೆಗಾಸ್ಟಾರ್​ಗಳೊಂದಿಗೆ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡದ ಹುಡುಗ ತೆಲುಗು ನೆಲದಲ್ಲಿ ಮತ್ತೆ ತಮ್ಮ ಸಾಧನೆಯ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಇದು ಕಿಚ್ಚನ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ…

ಮೆಗಾಸ್ಟಾರ್​ ಚಿರಂಜೀವಿ ಅಭಿನಯದ 151ನೇ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿರು 151ನೇ ಚಿತ್ರದ ಟೈಟಲ್​ ಮತ್ತು ಫಸ್ಟ್​ಲುಕ್​ ಈಗ ರಿಲೀಸ್​ ಆಗಿದೆ. ಈ ಜಬರ್​ದಸ್ತ್​​​​ ಫಸ್ಟ್​ಲುಕ್​ಗೆ ಚಿರು ಅಭಿಮಾನಿಗಳೆಲ್ಲಾ ಫಿದಾ ಆಗಿದ್ದಾರೆ…

ಸೈ ರಾ ನರಸಿಂಹರೆಡ್ಡಿ ಎಂಬುದು ಚಿರಂಜೀವಿ ಅಭಿನಯದ 151ನೇ ಚಿತ್ರದ ಟೈಟಲ್​​​.. ಮೆಗಾಸ್ಟಾರ್ ಚಿರಂಜೀವಿ 62ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಟೈಟಲ್​ ಮತ್ತು ಲೋಗೋ ರಿಲೀಸ್​ ಆಗಿದೆ. ಸೂಪರ್​ಹಿಟ್​ ಚಿತ್ರಗಳ ಸರದಾರ ರಾಜಮೌಳಿ ಇವುಗಳನ್ನು ಲಾಂಚ್ ಮಾಡಿದ್ದಾರೆ…

ಇದೊಂದು ಮಲ್ಟಿ ಸ್ಟಾರ್​ಗಳಿರುವ ಚಿತ್ರ… ಈ ಚಿತ್ರದಲ್ಲಿ ನಮ್ಮ ಕನ್ನಡದ ಹುಡುಗ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ಇದ್ದಾರೆ… ಕಿಚ್ಚ ಸುದೀಪ್​ಗೆ ಟಾಲಿವುಡ್​ ಹೊಸದಲ್ಲ. ಹಲವಾರು ಚಿತ್ರದ ಮೂಲಕ ಗಮನ ಸೆಳೆದಿರುವ ಸುದೀಪ್​ಗೆ ಅವಿಭಜಿತ ಆಂಧ್ರಪ್ರದೇಶದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ… ಇನ್ನು, ಕಾಲಿವುಡ್, ಬಾಲಿವುಡ್​ನಲ್ಲೂ ಕಿಚ್ಚನ ಹೆಜ್ಜೆ ಗುರುತುಗಳಿವೆ… ಈಗ ಸುದೀಪ್​ ಚಿರಂಜೀವಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜೀವನದ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದಾರೆ… ಕನ್ನಡ ಮತ್ತು ತೆಲುಗು ಗೊತ್ತಿರುವ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಮತ್ತೋರ್ವ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಹೀಗಾಗಿ, ಇಬ್ಬರು ಮೆಗಾಸ್ಟಾರ್​ಗಳೊಂದಿಗೆ ಕಿಚ್ಚ ಅಭಿನಯಿಸುತ್ತಿದ್ದಾರೆ… ಸುದೀಪ್​ ಈ ಹಿಂದೆ ಅಮಿತಾಭ್​ ಜೊತೆ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ರಣ್​ ಚಿತ್ರದಲ್ಲಿ ಇವರಿಬ್ಬರು ಜೊತೆಯಾಗಿದ್ದರು. ಸುದೀಪ್​ ನಟನೆ ಅಂದರೆ ಬಿಗ್​ ಬಿಗೆ ತುಂಬಾ ಇಷ್ಟ. ಸುದೀಪ್ ಅಭಿನಯವನ್ನು ಕಂಡ ಸೀನಿಯರ್​ ಬಚ್ಚನ್​ ತುಂಬಾ ಮೆಚ್ಚಿಕೊಂಡಿದ್ದರು…

ಇನ್ನು, ದಕ್ಷಿಣ ಭಾರತದ ಲೇಡಿ ಸೂಪರ್​ಸ್ಟಾರ್ ನಯನಾತಾರಾ ಈ ಚಿತ್ರದ ನಾಯಕಿ… ತೆಲುಗಿನ ಜಗಪತಿ ಬಾಬು, ತಮಿಳಿನ ವಿಜಯ್​ ಸೇತುಪತಿ ಕೂಡಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಡಬಲ್​ ಆಸ್ಕರ್​​ ಅವಾರ್ಡ್ ಪಡೆದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಚಿರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ…

ಲಾಂಗ್​ ಗ್ಯಾಪ್ನ​ ಬಳಿಕ ಚಿರು ಈಗ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ… ಈಗಾಗಲೇ 150 ಚಿತ್ರಗಳನ್ನು ಚಿರು ಪೂರೈಸಿದ್ದಾರೆ… ಚಿರಂಜೀವಿ 150ನೇ ಚಿತ್ರ ಖೈದಿ ನಂಬರ್​ 150…ಈ 150 ಚಿತ್ರವನ್ನು ಅಭಿಮಾನಿಗಳು ತುಂಬಾ ಪ್ರೀತಿಯಿಂದಲೇ ಸ್ವಾಗತಿಸಿದ್ದರು. ಇದೀಗ ಚಿರು 151ನೇ ಚಿತ್ರಕ್ಕೂ ಅಭಿಮಾನಿಗಳು ಇದೇ ರೀತಿ ಕಾತರಿಸುತ್ತಿದ್ದಾರೆ…

ಇದು ಐತಿಹಾಸಿಕ ಕತೆಯುಳ್ಳ ಚಿತ್ರ… ಸ್ವಾತಂತ್ರ್ಯ ವೀರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಕತೆಯೇ ಇದು ಎಂದು ಹೇಳಲಾಗುತ್ತಿದೆ.  ಕರ್ನಾಟಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದ್ದಂತೆ ಆಂಧ್ರ ಪ್ರದೇಶದಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿ ಅವರು ಕೂಡಾ ಓರ್ವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ… ಆಂಧ್ರ ಪ್ರದೇಶದ ಭಾಗದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ನಾಯಕ ಉಯ್ಯಲವಾಡ ನರಸಿಂಹ ರೆಡ್ಡಿ… ಇವರ ಜೀವನ ಕತೆಯೇ ಈಗ ಚಿತ್ರವಾಗುತ್ತಿದೆ…

ಸೈ ರಾ ನರಸಿಂಹರೆಡ್ಡಿ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸುರೇಂದ್ರ ರೆಡ್ಡಿ, ಕಿಕ್​, ರೇಸುಗುರಂ ಖ್ಯಾತಿಯ ನಿರ್ದೇಶಕ ಇವರು. ಬಹಳ ಗ್ಯಾಪ್​ನ ಬಳಿಕ ಚಿರಂಜೀವಿ  ಐತಿಹಾಸಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿರು ಪುತ್ರ ರಾಮ್​ ಚರಣ್​ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸುಮಾರು 150 ಕೋಟಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!