Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / Bollywood / 7 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಕಾಜೊಲ್, ಅಜಯ್ ದೇವಗನ್…!

7 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಕಾಜೊಲ್, ಅಜಯ್ ದೇವಗನ್…!

ಮುಂಬೈ : ಬಾಲಿವುಡ್ ತಾರಾ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ಕಾಜೋಲ್ ಮತ್ತು ಅಜಯ್ ಜೊತೆಯಾಗಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

2010ರಲ್ಲಿ ತೊನ್ಪುರ್ ಕಾ ಸೂಪರ್ ಹೀರೋ ಚಿತ್ರದಲ್ಲಿ ಇವರು ಜೊತೆಯಾಗಿ ನಟಿಸಿದ್ದರು. ಇದೀಗ ನಿರ್ದೇಶಕ ಪ್ರದೀಪ್ ಸರ್ಕಾರ್ ಹೊಸ ಚಿತ್ರ ಇವರನ್ನು ಒಂದು ಮಾಡಿದೆ. ಅಜಯ್ ಈ ಸುದ್ದಿಯನ್ನು ಬಹಳ ಹಿಂದೆಯೇ ದೃಢಪಡಿಸಿದ್ದು, ಸದ್ಯ ಪ್ರದೀಪ್ ಮತ್ತೆ ಈ ಜೋಡಿಯನ್ನು ಒಂದೇ ಚಿತ್ರದಲ್ಲಿ ಕಾಣುವ ಖುಷಿಯನ್ನು ಹಂಚಿಕೊಂಡಿದ್ದಾರೆ.

ಆಫ್ ಸ್ಕ್ರೀನ್ನ ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ನಲ್ಲೂ ಬಲು ದೊಡ್ಡದಾಗಿಯೇ ವರ್ಕೌಟ್ ಆಗುತ್ತಿದೆ. ಈ ಹಿಂದೆಯೂ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!