Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ಒಂದಾದ ಕಿಚ್ಚ ಸುದೀಪ್​-ಪ್ರಿಯಾ ದಂಪತಿ : ವಿಚ್ಛೇದನ ಅರ್ಜಿ ವಾಪಸ್​​…

ಒಂದಾದ ಕಿಚ್ಚ ಸುದೀಪ್​-ಪ್ರಿಯಾ ದಂಪತಿ : ವಿಚ್ಛೇದನ ಅರ್ಜಿ ವಾಪಸ್​​…

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಳಲ್ಲಿ ಹೊಸ ಭರವಸೆ ಮೂಡಿದೆ. ಪರಸ್ಪರ ದೂರವಾಗಿದ್ದ ಸುದೀಪ್​​ ಪ್ರಿಯಾ ದಂಪತಿ ಮತ್ತೆ ಒಂದಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆಯುವ ಮೂಲಕ ದಂಪತಿ ಮತ್ತೆ ಒಂದಾಗುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ.

2001ರಲ್ಲಿ ವಿವಾಹವಾಗಿದ್ದ ಸುದೀಪ್ ಪ್ರಿಯಾ ದಂಪತಿ 2015ರ ಸೆಪ್ಟೆಂಬರ್‌ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದರು. ಈ ಮೂಲಕ 14 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಸುದೀಪ್‌ ದಂಪತಿ ಮುಂದಾಗಿದ್ದರು. ಏನೋ ಒಂದು ಸಂದರ್ಭದಲ್ಲಿ ಬೇಸರಗೊಂಡು ದಂಪತಿ ಪರಸ್ಪರ ದೂರವಾಗಿದ್ದರು. ಆದರೆ, ಪ್ರೀತಿ ಮದುವೆಯಾಗಿದ್ದ ಈ ಜೋಡಿ ದೂರವಾದ ಬಳಿಕವೂ ಆಗಾಗ ಭೇಟಿಯಾಗುತ್ತಿದ್ದರು. ಅದಕ್ಕೆ ಕಾರಣ ಮುದ್ದು ಮಗಳು. ಮಗಳ ಸಲುವಾಗಿ ಭೇಟಿಯಾಗುತ್ತಿದ್ದ ಜೋಡಿ ಈಗ ಮತ್ತೆ ತಮ್ಮ ಮುಂದಿನ ಜೀವನವನ್ನು ಒಟ್ಟಾಗಿ ಸಾಗಿಸಲು ನಿರ್ಧರಿಸಿದ್ದಾರೆ. ಇವರು ಹೀಗೆ ಒಂದಾಗುವುದರ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪಾತ್ರವೂ ದೊಡ್ಡದಿದೆ.

ರವಿಚಂದ್ರನ್ ಕಂಡರೆ ಸುದೀಪ್​ಗೆ ಬಲುಪ್ರೀತಿ ಮತ್ತು ಸುದೀಪ್​ಗೂ ರವಿಚಂದ್ರನ್ ಕಂಡರೆ ಅತೀ ಗೌರವ. ಹೀಗಾಗಿ, ರವಿಚಂದ್ರನ್ ಈ ಹಿಂದೆಯೇ ದಂಪತಿ ಒಂದಾಗಿ ಬಾಳುವಂತೆ ಸಲಹೆ ನೀಡಿದ್ದರಂತೆ. ಅದರಂತೆ ಕಿಚ್ಚ ಸುದೀಪ್ ಕೂಡಾ ಮಗಳ ಬರ್ತ್​ಡೇ, ಸಮಾರಂಭದಲ್ಲಿ ಪ್ರಿಯಾ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಹೆಬ್ಬುಲಿ ಚಿತ್ರದ ರಿಲೀಸ್ ಸಂದರ್ಭದಲ್ಲೂ ಪ್ರಿಯಾ ಶುಭ ಹಾರೈಸಿದ್ದರು. ಮೊನ್ನೆ ಕಿಚ್ಚ ಸುದೀಪ್ ಟ್ವಿಟರ್​ನಲ್ಲಿ ಒಂದು ಮಿಲಿಯನ್​​ ಫಾಲೋವರ್ಸ್​ಗಳ ಸಾಧನೆ ಮಾಡಿದ ಸಂದರ್ಭದಲ್ಲೂ ಪ್ರಿಯಾ ಸುದೀಪ್​ ಅವರಿಗೆ ಶುಭಾ ಹಾರೈಸಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!