Monday , July 23 2018
ಕೇಳ್ರಪ್ಪೋ ಕೇಳಿ
Home / Gulf News / ಮಹಿಳೆ ಕಾರು ಚಲಾಯಿಸಿದ ವೀಡಿಯೋ ವೈರಲ್​ : ಮಹಿಳಾ ಡ್ರೈವರ್ ಸೇರಿ ನಾಲ್ವರು ಪೊಲೀಸ್​ ವಶಕ್ಕೆ

ಮಹಿಳೆ ಕಾರು ಚಲಾಯಿಸಿದ ವೀಡಿಯೋ ವೈರಲ್​ : ಮಹಿಳಾ ಡ್ರೈವರ್ ಸೇರಿ ನಾಲ್ವರು ಪೊಲೀಸ್​ ವಶಕ್ಕೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ

ಮನಾಮ : ಸೌದಿ ಅರೇಬಿಯಾ ಪೊಲೀಸರು ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ತೀವ್ರ ಪ್ರಶ್ನೆಗೆ ಒಳಪಡಿಸಿದ್ದಾರೆ.ಅಲ್ ಖಲೀಫಾದಲ್ಲಿ ಸಮಾಜ ಬಾಹಿರ ವರ್ತನೆ ತೋರಿದ್ದಕ್ಕೆ ಇವರಿಗೆ ಈಗ ಸಂಕಷ್ಟ ಎದುರಾಗಿದೆ.

ಮಹಿಳೆಯೊಬ್ಬರು ಪುರುಷರ ಸಾಂಪ್ರದಾಯಿಕ ಧಿರಿಸು ತೊಟ್ಟು, ಮುಖವನ್ನು ಮುಚ್ಚಿಕೊಂಡು ಕಾರು ಓಡಿಸುವ ವೀಡಿಯೋ ಇಲ್ಲಿ ವೈರಲ್ ಆಗಿತ್ತು. ಹೀಗಾಗಿ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಇಬ್ಬರು ಮಹಿಳೆಯರು ಅರಬ್​ನವರೇ ಎಂದು ಗೊತ್ತಾಗಿದೆ. ಆದರೆ, ಇವರು ಯಾವ ದೇಶದವರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಪ್ರಕರಣ ಈಗ ಮಹಿಳೆಯರ ಕಾರು ಚಲಾವಣೆ ಹಕ್ಕಿನ ಪರ ವಿರೋಧ ಚರ್ಚೆಗೂ ಕಾರಣವಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!