Monday , February 18 2019
ಕೇಳ್ರಪ್ಪೋ ಕೇಳಿ
Home / Mumbai Mail / ಹಳಿ ತಪ್ಪಿದ ಮುಂಬೈ ಲೋಕಲ್ ಟ್ರೈನ್​ : ಐವರಿಗೆ ಗಾಯ

ಹಳಿ ತಪ್ಪಿದ ಮುಂಬೈ ಲೋಕಲ್ ಟ್ರೈನ್​ : ಐವರಿಗೆ ಗಾಯ

ಮುಂಬೈ : ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಭೀಕರ ರೈಲು ದುರಂತ ಸಂಭವಿಸಿ 23 ಜನ ಸಾವನ್ನಪ್ಪಿದ್ದರು. ಈ ನೆನಪು ಹಸಿರಿರುವಾಗಲೇ ಇನ್ನೊಂದು ರೈಲು ದುರಂತ ಸಂಭವಿಸಿದೆ. ಮುಂಬೈಯ ಹಾರ್​​​​​​ಬಾರ್​ ಲೇನ್​ನ ಮಾಹಿಮ್ ನಿಲ್ದಾಣದಲ್ಲಿ ಲೋಕಲ್​ ಟ್ರೈನ್ ಹಳಿ ತಪ್ಪಿದ್ದು, ಐವರಿಗೆ ಗಾಯಗಳಾಗಿವೆ. ಬೆಳಗ್ಗೆ ಸುಮಾರು 9.55 ಗಂಟೆಗೆ ಈ ದುರಂತ ಸಂಭವಿಸಿದೆ.


ಈ ಘಟನೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಡಾಲಾ ಅಂಧೇರಿ ವಲಯದ ರೈಲು ಸಂಚಾರಕ್ಕೆ ಇದರಿಂದ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತಕ್ಕೀಡಾಗಿದ್ದ ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್​ನಿಂದ ಅಂಧೇರಿ ನಿಲ್ದಾಣಕ್ಕೆ ತೆರಳುತ್ತಿದ್ದ. ಆದರೆ, ಮಾಹಿಮ್​ ನಿಲ್ದಾಣದ ಸಮೀಪ ಬರುವಾಗ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು ಎಂದು ಹೇಳಲಾಗುತ್ತಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!