Wednesday , November 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಚಿರಂಜೀವಿಗೆ ಎಸ್​ ಎಂದಿದ್ದ ಅಮಿತಾಭ್​ ಬಾಲಕೃಷ್ಣಗೆ ನೋ ಎಂದಿದ್ದೇಕೆ…? ಆ ಮೇಲೆ ಏನಾಯ್ತು ಗೊತ್ತಾ…?

ಚಿರಂಜೀವಿಗೆ ಎಸ್​ ಎಂದಿದ್ದ ಅಮಿತಾಭ್​ ಬಾಲಕೃಷ್ಣಗೆ ನೋ ಎಂದಿದ್ದೇಕೆ…? ಆ ಮೇಲೆ ಏನಾಯ್ತು ಗೊತ್ತಾ…?

ಹೈದರಾಬಾದ್​ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನೆಮಾದಲ್ಲಿ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಇಬ್ಬರು ಲೆಜೆಂಡ್​ಗಳು ಒಂದಾಗುತ್ತಿದ್ದಾರೆ. ಇದು ತೆಲುಗು ಚಿತ್ರಪ್ರೇಮಿಗಳಿಗೆ ಖುಷಿ ತಂದಿದೆ. ಆದರೆ, ಇದೇ ಅಮಿತಾಭ್​ ಬಚ್ಚನ್ ಬಾಲಕೃಷ್ಣ ಅವರ ಚಿತ್ರಕ್ಕೆ ಬಂದಿದ್ದ ಆಫರ್​ ಅನ್ನು ತಿರಸ್ಕರಿಸಿದ್ದರು ಎಂಬ ವಿಷಯವೂ ಈಗ ಬಹಿರಂಗವಾಗಿದೆ…! ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಅಮಿತಾಭ್​ ಚಿರು ಚಿತ್ರಕ್ಕಿಂತಲೂ ಮುಂಚೆ ಬಾಲಕೃಷ್ಣ ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು…!

ಕೆಲ ತಿಂಗಳ ಹಿಂದೆ ಬಾಲಕೃಷ್ಣ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ರೈತು ಎಂಬ ಚಿತ್ರಕ್ಕೆ ಅಮಿತಾಭ್​ ಅವರನ್ನು ಹಾಕಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕಾಗಿಯೇ ಮುಂಬೈಗೆ ತೆರಳಿದ ಈ ಇಬ್ಬರು ಸರ್ಕಾರ್​ ತ್ರಿ ಚಿತ್ರದ ಶೂಟಿಂಗ್ ಸೆಟ್​ಗೆ ಹೋಗಿ ಮಾತನಾಡಿ ಬಂದಿದ್ದರು. ಮತ್ತು ತಮ್ಮ ರೈತು ಚಿತ್ರದಲ್ಲಿ ನಟಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಅಮಿತಾಭ್​ ಅದ್ಯಾಕೋ ಈ ಚಿತ್ರಕ್ಕೆ ಒಲ್ಲೆ ಎಂದು ಬಿಟ್ಟರು. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿದ ಈ ಇಬ್ಬರು ಈ ಪ್ರಾಜೆಕ್ಟ್​ ಅನ್ನೇ ಕೈ ಬಿಟ್ಟಿದ್ದರು…! ಅಮಿತಾಭ್​ ಬೇಡ ಎಂದಿದ್ದಕ್ಕೇ ಈ ಚಿತ್ರವನ್ನು ಇವರಿಬ್ಬರು ಕೈ ಬಿಟ್ಟಿದ್ದರಂತೆ…

ಆದರೆ, ಇದಾದ ಕೆಲವೇ ತಿಂಗಳಲ್ಲಿ ಅಮಿತಾಭ್​ಗೆ ಕರೆ ಮಾಡಿದ ಚಿರಂಜೀವಿ ತಮ್ಮ ಸೈರಾ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಅಮಿತಾಭ್​ ಹಿಂದೆ ಮುಂದೆ ನೋಡದೆ ಎಸ್​ ಎಂದು ಬಿಟ್ಟಿದ್ದರು…! ಇದಕ್ಕೆ ಕಾರಣ ಸಿಂಪಲ್​. ಚಿರಂಜೀವಿ ಮತ್ತು ಅಮಿತಾಭ್​ ತುಂಬಾ ಒಳ್ಳೆಯ ಸ್ನೇಹಿತರು. ಇಬ್ಬರು ನಡುವೆ ಉತ್ತಮ ಬಾಂಧವ್ಯ ಇದೆ. ಎರಡೂ ಕುಟುಂಬಸ್ಥರೂ ತುಂಬಾ ಆಪ್ತರಾಗಿದ್ದರೆ. ಇದೇ ಕಾರಣಕ್ಕೆ ಚಿರು ಒಂದು ಫೋನ್​ ಕಾಲ್​ಗೇ ಅಮಿತಾಭ್​ ಚಿತ್ರದಲ್ಲಿ ನಟಿಸೋದಕ್ಕೆ ಸಮ್ಮತಿಸಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!