Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಭಗ್ನ ಪ್ರೇಮಿಯ ಪಾಪಕೃತ್ಯ…! : 15 ರ ಹುಡುಗಿಯ ತಲೆಗೆ ಕತ್ತಿಯಿಂದ ಕಡಿದು ಕ್ರೌರ್ಯ

ಭಗ್ನ ಪ್ರೇಮಿಯ ಪಾಪಕೃತ್ಯ…! : 15 ರ ಹುಡುಗಿಯ ತಲೆಗೆ ಕತ್ತಿಯಿಂದ ಕಡಿದು ಕ್ರೌರ್ಯ

ಉತ್ತರ ಪ್ರದೇಶ : ಪ್ರೀತಿಸಲು ನಿರಾಕರಿಸಿದ ಕೋಪದಲ್ಲಿ ನೀಚನೊಬ್ಬ 15 ವರ್ಷದ ಬಾಲಕಿಯ ತಲೆ ಮತ್ತು ಕೈಗೆ ಕತ್ತಿಯಿಂದ ಕಡಿದು ಕ್ರೌರ್ಯ ಮೆರೆದಿದ್ದಾನೆ. ಉತ್ತರ ಪ್ರದೇಶದ ಲಕ್ಷ್ಮೀಪುರ ಖೇರಿ ಮಾರ್ಕೆಟ್​ನಲ್ಲಿ ಹಾಡಹಗಲೇ ಈ ಘಟನೆ ನಡೆದಿದೆ. ಈ ದುಷ್ಕೃತ್ಯವೆಸಗಿದ ಪಾಪಿಯನ್ನು30 ವರ್ಷದ ರೋಹಿತ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಈತ ಫತೇಪುರ್​ ಜಿಲ್ಲೆಯವನು ಎಂದು ಗೊತ್ತಾಗಿದೆ.
ತನ್ನ ಸಹೋದರನೊಂದಿಗೆ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಸಂದರ್ಭದಲ್ಲಿ ಈ ನೀಚ ದಾಳಿ ಮಾಡಿದ್ದಾನೆ. ತಕ್ಷಣ ಅಲ್ಲಿದ್ದರುವ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು, ದಾಳಿಕೋರನನ್ನು ಹಿಡಿದ ಸ್ಥಳೀಯರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!