Wednesday , January 24 2018
Home / Mumbai Mail / ‘ಲಾಲ್​​​ಬಾಗ್​​​ ಚಾ ರಾಜಾ‘ನಿಗೆ ನಮಿಸಿದ ಜನ : ಸಂಭ್ರಮದ ನಡುವೆ ಸೆಲ್ಫಿ ಖುಷಿ
Buy Bitcoin at CEX.IO

‘ಲಾಲ್​​​ಬಾಗ್​​​ ಚಾ ರಾಜಾ‘ನಿಗೆ ನಮಿಸಿದ ಜನ : ಸಂಭ್ರಮದ ನಡುವೆ ಸೆಲ್ಫಿ ಖುಷಿ

ಮುಂಬೈ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಮಹತ್ವ. ಇಲ್ಲಿನ ಲಾಲ್​ ಬಾಗ್​ ಚಾ ರಾಜಾ ಗಣೇಶ ಅಂದರೆ ಇಡೀ ರಾಜ್ಯಾದ್ಯಂತ ಪ್ರಸಿದ್ಧಿ. ಇಷ್ಟಾರ್ಥಗಳನ್ನು ಕರುಣಿಸೋ ರಾಜ ಇಲ್ಲಿನ ಗಣೇಶ, ಇಲ್ಲಿನ ಗಣಪನ ದರ್ಶನ ಪಡೆಯಲು ಜನ ಕಿಲೋ ಮೀಟರ್​ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದು ಸತ್ಯ…

ಕೇಂದ್ರ ಮುಂಬೈ ಭಾಗದ ಅಂಬೇಡ್ಕರ್ ರಸ್ತೆಯಲ್ಲಿರುವ ಲಾಲ್​ಬಾಗ್ ಮಾರುಕಟ್ಟೆ ಸಮೀಪ ಈ ಭವ್ಯ ಮತ್ತು ಆಕರ್ಷಕ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಸುಮಾರು 1934 ರಿಂದಲೇ ಲಾಲ್​​​​ಬಾಗ್​ ಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಲ್​ ಇಲ್ಲಿ ಅದ್ಧೂರಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಇದು ಇಲ್ಲಿ ಅತೀ ಹಳೆಯ ಮತ್ತು ಪ್ರಖ್ಯಾತ ಗಣೇಶೋತ್ಸವ. 1934 ಸೆಪ್ಟೆಂಬರ್​ 12 ರಂದು ಮೊದಲ ಗಣೇಶೋತ್ಸವವನ್ನು ಇಲ್ಲಿ ಆಚರಿಸಲಾಗಿತ್ತು. ಅಲ್ಲಿಂದ ಇಲ್ಲಿ ತನಕ ಈ ಗಣೇಶೋತ್ಸವ ತುಂಬಾ ಸಡಗರದಿಂದಲೇ ನಡೆಯುತ್ತಿದೆ. ಬಾಲಿವುಡ್ ಸ್ಟಾರ್​ಗಳು ಸೇರಿದಂತೆ ಹಲವು ಖ್ಯಾತನಾಮರೆಲ್ಲಾ ಈ ಗಣೇಶನ ಪರಮ ಭಕ್ತರು.ಈಗ ಇಲ್ಲಿ ಎಲ್ಲೆಲ್ಲೂ ಗಣಪತಿ ಬಪ್ಪಾ ಮೋರಿಯಾ ಎಂಬ ಘೋಷಣೆಗಳೇ ಕೇಳಿ ಬರುತ್ತಿದೆ. ಇಲ್ಲಿ 11 ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಭಕ್ತಿ, ಭಾವದಿಂದ ಪೂಜೆ ಮಾಡಲಾಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿ ಜನ ಸೇರಿರುತ್ತಾರೆ. ಹೀಗೆ ಬರುವ ಭಕ್ತರು ಗಣೇಶನ ವಿಗ್ರಹದೊಂದಿಗೆ ಸೆಲ್ಫಿ ತೆಗೆದೂ ಸಂಭ್ರಮಿಸುತ್ತಿದ್ದಾರೆ… ಈ ಮೂಲಕ ಹಬ್ಬದ ಖುಷಿಯನ್ನು ಇನ್ನಷ್ಟು ಇಮ್ಮಡಿಯಾಗಿಸುತ್ತಿದ್ದಾರೆ.

CEX.IO Bitcoin Exchange

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!