ಪುಣೆ : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಮದ್ ದಗ್ಡು ಶೇಟ್ ಹಲ್ವಾಯಿ ಗಣಪತಿ ಈ ಬಾರಿ ಅದ್ಧೂರಿ ಆಭರಣಗಳಿಂದ ಕಂಗೊಳಿಸುತ್ತಿದೆ. ಭಾರತದ ಪ್ರಸಿದ್ಧ ಆಭರಣ ತಯಾರಿಕಾ ಸಂಸ್ಥೆ ಪಿಎನ್ಜಿ ಜ್ಯುಲೆವರ್ಸ್ ಇಲ್ಲಿ ಗಣಪತಿ ಉತ್ಸವಕ್ಕೆ ಇನ್ನಷ್ಟು ಕಳೆ ತಂದಿದೆ. ಇಲ್ಲಿನ ಗಣಪತಿಗಾಗಿಯೇ ಜ್ಯುವೆಲರ್ಸ್ ಅಪರೂಪದ ಆಭರಣಗಳನ್ನು ವಿನ್ಯಾಸಗೊಳಿಸಿದೆ.
ಪಿಎನ್ಜಿ ಜ್ಯುವಲರ್ಸ್ ಆರಂಭವಾದಾಗಿನಿಂದಲೂ ಇಲ್ಲಿನ ಗಣೇಶೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ಬಾರಿ ಮಾಸ್ಟರ್ ಪೀಸ್ ಆಗುವಂತಹ ಆಭರಣವನ್ನು ದೇವರಿಗಾಗಿಯೇ ತಯಾರಿಸಿಕೊಟ್ಟಿದೆ ಈ ಸಂಸ್ಥೆ. ಶ್ರೀಮದ್ ದಗ್ಡುಶೇಟ್ ಹವಾಲಿ ಮಂಡಳ್ 125ನೇ ವರ್ಷದ ಗಣೋತ್ಸವ ಆಚರಣೆ ಸಂಭ್ರಮದಲ್ಲಿದೆ.
ಸುಮಾರು ಐದು ತಿಂಗಳ ಕಾಲ ಹಲವು ಕಾರ್ಮಿಕರು ಶ್ರಮವಹಿಸಿ ಈ ಆಭರಣ ತಯಾರಿಸಿದ್ದಾರೆ. ಈ ಆಭರಣ ತಯಾರಿಕೆಗೆ 6 ಸಾವಿರ ಗಂಟೆಗಳು ಹಿಡಿದಿವೆ. ಬಂಗಾರ, ವಜ್ರ ಮತ್ತು ವಿವಿಧ ನಮೂನೆಯ ಅಮೂಲ್ಯ ಹರಳುಗಳನ್ನು ಈ ಆಭರಣಕ್ಕೆ ಬಳಸಲಾಗಿದೆ. ಇದರ ತೂಕ ಸುಮಾರು 40 ಕೆ.ಜಿಗೂ ಅಧಿಕ.
ಏಳು ದಿನಗಳ ಕಾಲ ಏಳು ರೀತಿಯ ಕಿರೀಟದಿಂದ ಗಣೇಶನನ್ನು ಇಲ್ಲಿ ಅಲಂಕರಿಸಲಾಗುತ್ತದೆ. ಅದಕ್ಕಾಗಿ ವಿವಿಧ ಬಗೆಯ ಚಿನ್ನದ ಕಿರೀಟಗಳೂ ಸಿದ್ಧವಾಗಿವೆ.