Friday , April 20 2018
Home / Gulf News / ಸೌದಿ ಮೂಲದ ಮಗು ಕೇರಳದ ಸ್ವಿಮಿಂಗ್ ಪೂಲ್​ನಲ್ಲಿ ಸಾವು…!

ಸೌದಿ ಮೂಲದ ಮಗು ಕೇರಳದ ಸ್ವಿಮಿಂಗ್ ಪೂಲ್​ನಲ್ಲಿ ಸಾವು…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ಸೌದಿ ಅರೇಬಿಯಾ : ಕುಟುಂಬದೊಂದಿಗೆ ಕೇರಳ ಪ್ರವಾಸ ಬಂದಿದ್ದ ಸೌದಿ ಮೂಲದ ನಾಲ್ಕು ವರ್ಷದ ಕಂದ ದುರ್ಮರಣಕ್ಕೀಡಾಗಿದೆ. ಸ್ವಿಮಿಂಗ್​ ಪೂಲ್​ನಲ್ಲಿ ಈ ಮಗು ಸಾವಿಗೀಡಾಗಿದೆ. ಇಲ್ಲಿನ ಪ್ರವಾಸಿ ತಾಣದ ಕುಮಾರಾಕೋಮ್​​ನ ರೆಸಾರ್ಟ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೊಟ್ಟಾಯಂನ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದೆ.

ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಮಗು ಮಕ್ಕಳ ಸ್ವಿಮಿಂಗ್ ಪೂಲ್​ನಲ್ಲಿ ಇದ್ದರೆ, ದೊಡ್ಡವರ ಈಜುಕೊಳದಲ್ಲಿ ಮಗುವಿನ ತಂದೆ ಇದ್ದರು ಎಂದು ಗೊತ್ತಾಗಿದೆ. ಸದ್ಯದ ಮೂಲದ ಪ್ರಕಾರ, ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಮೃತ ಮಗುವಿನ ತಂದೆ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!