Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Tollywood / ತಾಯಿ ಆಗುತ್ತಿದ್ದಾರಾ ನಯನಾತಾರಾ…?!

ತಾಯಿ ಆಗುತ್ತಿದ್ದಾರಾ ನಯನಾತಾರಾ…?!

ಹೈದರಾಬಾದ್​ : ದಕ್ಷಿಣ ಭಾರತದ ಲೇಡಿ ಸೂಪರ್​ಸ್ಟಾರ್ ನಯನಾತಾರಾ ತಾಯಿ ಆಗುತ್ತಿದ್ದಾರಾ…? ಅರೇ ಇದೇನು ಮಾತು ಹೇಳ್ತಿದ್ದೀರಿ ಅಂತ ಹೇಳ್ಬೇಡಿ… ಕನ್​​ಫ್ಯೂಸ್ ಆಗ್ಬೇಡಿ. ನಯನಾತಾರಾ ನಿಜ ಜೀವನದಲ್ಲಿ ತಾಯಿ ಆಗುತ್ತಿಲ್ಲ. ಬದಲಾಗಿ ಸಿನೆಮಾದಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದಾರೆ. ಆದರೆ, ನಯನಾತಾರಾ ತಾಯಿ ಪಾತ್ರ ಮಾಡಲು ಹೊರಟ್ಟಿದ್ದು ಯಾರಿಗೆ ಗೊತ್ತಾ…? ಟಾಲಿವುಡ್​ ನಟ ನಂದಮೂರಿ ಬಾಲಕೃಷ್ಣರಿಗೆ…!

ನಂದಮೂರಿ ಬಾಲಕೃಷ್ಣ ಅವರು ತಮ್ಮ 102ನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಕೆ.ಎಸ್.ರವಿಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಯನಾತಾರರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನಂದಮೂರಿ ಬಾಲಕೃಷ್ಣ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಾಯಕನಿಗೆ ನಯನಾತಾರಾ ಮೂರನೇ ಬಾರಿಗೆ ನಾಯಕಿ ಆಗುತ್ತಾರೆ ಎಂಬ ಖುಷಿಯಲ್ಲಿ ಇದ್ದರು. ಆದರೆ, ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ನಯನಾತಾರಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡುತ್ತಿಲ್ಲವಂತೆ. ಈ ಚಿತ್ರದ ಪ್ರಮುಖ ಪಾತ್ರವೊಂದರ ಹೆಂಡತಿಯ ಪಾತ್ರದಲ್ಲಿ ನಯನಾ ಕಾಣಿಸಿಕೊಳ್ಳುತ್ತಿದ್ದು, ಬಾಲಕೃಷ್ಣರ ತಾಯಿಯ ರೋಲ್​​ ಅನ್ನೂ  ನಿರ್ವಹಿಸುತ್ತಿದ್ದಾರಂತೆ.

ಇನ್ನೊಂದ್ಕಡೆ, ಚಿರಂಜೀವಿ ಅಭಿನಯ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ನಯನಾತಾರಾ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಬಾಲಕೃಷ್ಣರ ಚಿತ್ರದಲ್ಲಿ ಇವರು ಪೂರ್ಣ ಪ್ರಮಾಣದಲ್ಲಿ ಅಭಿನಯಿಸುತ್ತಾರೋ ಅಥವಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೋ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಈ ಪ್ರಶ್ನೆಗಳಿಗೆ ಸದ್ಯದ ವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!