Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಟಿ ರಾಣಿ ಮುಖರ್ಜಿ ಮನೆಗೆ ಈ ಚೌತಿಗೆ ಗಣಪತಿಯಲ್ಲ ಪೊಲೀಸರು ಬರ್ತಿದ್ದಾರೆ…!

ನಟಿ ರಾಣಿ ಮುಖರ್ಜಿ ಮನೆಗೆ ಈ ಚೌತಿಗೆ ಗಣಪತಿಯಲ್ಲ ಪೊಲೀಸರು ಬರ್ತಿದ್ದಾರೆ…!

ಮುಂಬೈ : ಎಲ್ಲರೂ ಗಣೇಶೋತ್ಸವ ಸಂಭ್ರಮದಲ್ಲಿದ್ದಾರೆ. ಆದರೆ, ಬಾಲಿವುಡ್ ನಟಿ ರಾಣಿ ಮುಖರ್ಜಿ ಮುಖದಲ್ಲಿ ಆ ಸಂಭ್ರಮ ಇಲ್ಲ. ಕಾರಣ, ರಾಣಿಗೆ ಶುರುವಾಗಿದೆ ಕಾನೂನು ಸಂಕಟ. ಯಾವುದೇ ಸಂದರ್ಭದಲ್ಲಿ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಅಥವಾ ಪೊಲೀಸರು ತಮ್ಮ ಮನೆಗೆ ಬರುವ ಭೀತಿ ರಾಣಿಗಿದೆ. ಇದಕ್ಕೆ ಕಾರಣ ಜುಹೂ ಬಂಗಲೆಯ ಅಕ್ರಮ ಕಾಮಗಾರಿ…

ಹೌದು, ಬಿಎಂಸಿ ನೀಡಿದ ಅನುಮತಿಯನ್ನೇ ಉಲ್ಲಂಘಿಸಿ ರಾಣಿ ಇಲ್ಲಿ ಬಂಗಲೆಯ ಕಾಮಗಾರಿ ನಡೆಸಿದ್ದಾರೆ ಅಂತ ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಬಂಗಲೆಯ ಎತ್ತರವನ್ನು ಅಕ್ರಮವಾಗಿ ಹೆಚ್ಚಿಸಲಾಗಿದೆ ಎಂಬುದು ಈ ದೂರು. ಆದರೆ, ರಾಣಿ ಮುಖರ್ಜಿ ವಕ್ತಾರರು ಮಾತ್ರ ಈ ಆರೋಪವನ್ನು ಅಲ್ಲಗೆಳೆದಿದ್ದಾರೆ. ಅಲ್ಲದೆ, ಅನುಮತಿ ನೀಡಿದಷ್ಟೇ ಎತ್ತರಕ್ಕೆ ಬಂಗಲೆಯ ಕಾಮಗಾರಿ ನಡೆದಿದೆ ಎಂದು ಹೇಳಿದ್ದಾರೆ.

ಇದೀಗ, ರಾಣಿಗೆ ಸಂಕಷ್ಟ ತಂದಿದೆ. ಬಿಎಂಸಿ ಅಧಿಕಾರಿಗಳು ಈ ಹಿಂದೆಯೂ ರಾಣಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಆಗಸ್ಟ್​ 30ಕ್ಕೆ ಮತ್ತೆ ರಾಣಿ ಮನೆಗೆ ಅಧಿಕಾರಿಗಳು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಈ ಬಾರಿ ಅಧಿಕಾರಿಗಳು ಪೊಲೀಸರೊಂದಿಗೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!