Wednesday , November 21 2018
ಕೇಳ್ರಪ್ಪೋ ಕೇಳಿ
Home / Gulf News / ಕಾರಿನೊಳಗೆ ಸಿಲುಕಿಕೊಂಡ ಎರಡು ವರ್ಷದ ಮಗು…!

ಕಾರಿನೊಳಗೆ ಸಿಲುಕಿಕೊಂಡ ಎರಡು ವರ್ಷದ ಮಗು…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ

ಅಜ್ಮಾನ್​ : ಪೋಷಕರು ತಮ್ಮ ಕಾರಿನಲ್ಲಿ ಬಿಟ್ಟು ಹೋಗಿದ್ದ ಎರಡು ವರ್ಷದ ಮಗು ಹೊರಬರಲಾರದೆ ಕಾರಿನೊಳಗೇ ಸಿಲುಕಿಕೊಂಡ ಘಟನೆ ಅಲ್​ ರೌದಾ ಪ್ರದೇಶದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 11.55ಕ್ಕೆ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಕಾರಿನ ಬಾಗಿಲನ್ನು ಒಡೆದು ಮಗುವನ್ನು ರಕ್ಷಿಸಿದೆ. ಮಗು ಸದ್ಯ ಆರೋಗ್ಯವಾಗಿದ್ದು, ಪೋಷಕರಿಗೆ ಮಗುವನ್ನು ಒಪ್ಪಿಸಲಾಗಿದೆ ಎಂದು ಕರ್ನಲ್ ಮುಸ್ತಫಾ ಸುಲ್ತಾನ್​ ಅಲ್​ ಅಲಿ ಹೇಳಿದ್ದಾರೆ. ಇನ್ನು, ಈ ರೀತಿ ಮಕ್ಕಳನ್ನು ಒಬ್ಬಂಟಿಯಾಗಿ ಕಾರಿನೊಳಗೆ ಬಿಟ್ಟು ಹೋಗುವುದು ತುಂಬಾ ಅಪಾಯಕಾರಿ. ಅದರಲ್ಲೂ ಬೇಸಿಗೆ ಕಾಲದಲ್ಲಿ ಯಾವ ಪೋಷಕರೂ ಈ ರೀತಿ ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಅತೀ ಹೆಚ್ಚು ತಾಪಮಾನ ಇರುವ ಸಂದರ್ಭದಲ್ಲಿ ಕಾರಿನ ಕ್ಯಾಬಿನ್​ನೊಳಗೆ ಆಮ್ಲಜನಕದ ಒತ್ತಡ ಹೆಚ್ಚಾಗುವುದರಿಂದ ಡ್ಯಾಶ್​ ಬೋರ್ಡ್​ ಮತ್ತು ಸೀಟ್​ಗಳಿಂದ ಟಾಕ್ಸಿಕ್​ ಗ್ಯಾಸ್​ ಅನ್ನು ಅದು ಬಿಡುಗಡೆ ಮಾಡಲುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!