Tuesday , December 12 2017
Home / Bollywood / ಮಾನ್ಯತಾ ಹಾಟ್ ಹಾಟ್​ ಫೋಟೋಗೆ ಸಂಜಯ್​ ದತ್​ ಗರಂ…?!

ಮಾನ್ಯತಾ ಹಾಟ್ ಹಾಟ್​ ಫೋಟೋಗೆ ಸಂಜಯ್​ ದತ್​ ಗರಂ…?!

ಮುಂಬೈ : ಬಾಲಿವುಡ್ ನಟ ಸಂಜಯ್​ ದತ್​ ತನ್ನ ಪತ್ನಿ ಮಾನ್ಯತಾ ಮೇಲೆ ಮುನಿಸಿಕೊಂಡಿದ್ದಾರಂತೆ… ಇದಕ್ಕೆ ಕಾರಣ, ಮಾನ್ಯತಾ ಹಾಟ್​ ಹಾಟ್​ ಲುಕ್​…! ತನ್ನ ಪತ್ನಿ ಈ ರೀತಿ ಕಾಣಿಸಿಕೊಳ್ಳುವುದಕ್ಕೆ ಸಂಜಯ್​ಗೆ ಸಿಟ್ಟಿದ್ಯಂತೆ. ಆದರೆ, ಮಾನ್ಯತಾ ಮಾತ್ರ ಬಾಲಿವುಡ್​ನಲ್ಲಿ ಮಿಂಚುವ ಸಲುವಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ…

ಬಾಲಿವುಡ್ ನಟ ಸಂಜಯ್​ ದತ್ ಪತ್ನಿ ಮಾನ್ಯತಾ ಇತ್ತೀಚೆಗೆ ಸಖತ್ ಹಾಟ್ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇದು ಮಾನ್ಯತಾರಾ? ಎಂದು ಎಲ್ಲರೂ ಕೇಳುವ ಮಟ್ಟಿಗೆ ಇವರ ಲುಕ್​ ಇತ್ತು… ಅದರಲ್ಲೂ ಬಿಕಿನಿಯಲ್ಲೂ ಮಿಂಚುವ ಮೂಲಕ ಇವರು ಕೆಲವರ ಕಣ್ಣು ಕುಕ್ಕುವಂತೆ ಮಾಡಿದ್ದರು. ಇತ್ತೀಚೆಗೆ ತಮ್ಮ ಇನ್​ಸ್ಟ್ರಗ್ರಾಮ್​​ನಲ್ಲಿ ಮಾನ್ಯತಾ ಹಾಟ್​ ಹಾಟ್​ ಫೋಟೋಗಳನ್ನು ಅಪ್​ಲೋಡ್ ಮಾಡಿದ್ದರು. ಸ್ವಿಮಿಂಗ್​ ಸೂಟ್​ನಲ್ಲಿ ಮಿಂಚುವ ಈ ಫೋಟೋ ಮೂಲಕ ಮಾನ್ಯತಾ ಹುಬ್ಬೇರಿಸುವಂತೆ ಮಾಡಿದ್ದರು…

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಮಾನ್ಯತಾ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ, ತಾನು ಈ ಹಿಂದೆ ಇದ್ದಂತೆ ಸಹಜ ಧಿರಿಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾನ್ಯತಾರಲ್ಲಾದ ಈ ದಿಢೀರ್ ಬದಲಾವಣೆಗೆ ಇರುವ ಕಾರಣ ಪತಿ ಸಂಜಯ್​ ಮುನಿಸಂತೆ…!

ಹೌದು, ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬುವುದಾದರೆ, ಮಾನ್ಯತಾ ಈ ರೀತಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವುದಕ್ಕೆ ಪತಿ ಸಂಜಯ್​ ದತ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಂತೆ… ಇದೇ ಕಾರಣಕ್ಕೆ ಮಾನ್ಯತಾ ಈ ರೀತಿ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ…

ಮಾನ್ಯತಾ ಈ ರೀತಿ ಹಾಟ್ ಹಾಟ್ ಫೋಟೋಗಳನ್ನು ಹಾಕಿಕೊಳ್ಳುವುದಕ್ಕೂ ಒಂದು ಕಾರಣ ಇದೆ. ಇವರನ್ನು ಹತ್ತಿರದಿಂದ ಬಲ್ಲ ಸ್ನೇಹಿತರು ಹೇಳುವ ಪ್ರಕಾರ, ಮಾನ್ಯತಾಗೆ ಈಗ ಬಾಲಿವುಡ್​ನಲ್ಲಿ ಮಿಂಚುವ ಮನಸ್ಸಾಗಿದೆ. ಹೀಗಾಗಿ, ಚಿತ್ರ ನಿರ್ಮಾತೃಗಳ ಗಮನ ಸೆಳೆಯುವ ಸಲುವಾಗಿಯೇ ಮಾನ್ಯತಾ ಇಂತಹ ಹಾಟ್ ಫೋಟೋ ಹಾಕುವ ದಾರಿ ಹಿಡಿದಿದ್ದಾರಂತೆ. ಅದಲ್ಲದೆ, ಬಾಲಿವುಡ್​ನಲ್ಲಿ ಮಿಂಚುವ ತನ್ನ ಹೆಬ್ಬಯಕೆಗೆ ಇದು ಸಾಕ್ಷಿಯೂ ಆಗಿದೆ…

ಆದರೆ, ತಮ್ಮ ಮನೆಯ ಹೆಣ್ಮಕ್ಕಳು ಸಿನಿ ಲೋಕಕ್ಕೆ ಬರುವುದು ಸಂಜೂಗೆ ಸುತಾರಂ ಇಷ್ಟ ಇಲ್ಲ. ಇದು ಬಹಿರಂಗವಾಗಿರುವ ಸತ್ಯ. ಈ ಹಿಂದೆಯೂ ತನ್ನ ಮಗಳ ಸಿನಿಲೋಕದ ಎಂಟ್ರಿ ಬಗ್ಗೆಯೂ ಸಂಜೂ ಬಹಿರಂಗವಾಗಿಯೇ ದೊಡ್ಡ ಹೇಳಿಕೆ ಕೊಟ್ಟಿದ್ದರು. ನನ್ನ ಮಗಳು ತ್ರಿಶಾಲ ನಟಿಯಾಗಬೇಕೆಂದು ಆಸೆ ಪಟ್ಟರೆ ನಾನು ಅವಳ ಕಾಲು ಮುರಿದಾಕುತ್ತೇನೆ ಎಂದು ಅಬ್ಬರಿಸಿ ಸಂಜಯ್​ ದೊಡ್ಡ ಸುದ್ದಿಯ ವಸ್ತುವಾಗಿದ್ದನ್ನು ಯಾರೂ ಮರೆತಿಲ್ಲ.

ಮಗಳನ್ನೇ ಸಿನಿಲೋಕಕ್ಕೆ ಬರಲು ಬಿಡದ ಸಂಜಯ್​ ಇನ್ನು ಪತ್ನಿಯನ್ನು ಬರಲು ಬಿಡುತ್ತಾರಾ…? ಛಾನ್ಸೇ ಇಲ್ಲ. ಮಾನ್ಯತಾ ಕೂಡಾ ಬಾಲಿವುಡ್ ಪ್ರವೇಶಿಸುವ ತಮ್ಮ ಹೆಬ್ಬಯಕೆಯನ್ನು ಮುಂದಿಟ್ಟಾಗ ಸಂಜಯ್​ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಈ ಮೂಲಕ ಇನ್ಸ್​ಸ್ಟ್ರಾಗ್ರಾಮ್​ನಲ್ಲಿ ಮಾನ್ಯತಾ ಹಾಕುತ್ತಿದ್ದ ಹಾಟ್ ಹಾಟ್ ಫೋಟೋಗಳಿಗೂ ಇವರು ಬ್ರೇಕ್​ ಹಾಕಿದ್ದಾರಂತೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!