Tuesday , August 14 2018
ಕೇಳ್ರಪ್ಪೋ ಕೇಳಿ
Home / News NOW / ಲಿಂಗ ಪರಿವರ್ತಿತ ಜೋಡಿಯ ಮದುವೆ : ಬರುತ್ತಿದೆ ಬೆದರಿಕೆ

ಲಿಂಗ ಪರಿವರ್ತಿತ ಜೋಡಿಯ ಮದುವೆ : ಬರುತ್ತಿದೆ ಬೆದರಿಕೆ

ತಿರುವನಂತಪುರ: ಕೇರಳದಲ್ಲಿ ಮೊದಲ ಬಾರಿಗೆ ಲಿಂಗ ಪರಿವರ್ತಿತ ಜೋಡಿಯ ಮದುವೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ. ಈ ಮದುವೆ ಘೋಷಣೆಯಾದ ಬೆನ್ನಲ್ಲೇ ಈ ಜೋಡಿಗೆ ಬೆದರಿಕೆ ಕರೆ ಬರುತ್ತಿದ್ದು, ಪೊಲೀಸರಿಗೂ ದೂರು ಸಲ್ಲಿಸಲಾಗಿದೆ.

46 ವರ್ಷದ ಅರವ್ ಅಪ್ಪುಕುಟ್ಟಿಯಾನ್​ ಮತ್ತು 21 ವರ್ಷದ ಸಂಯುಕ್ತ ಕೃಷ್ಣ ಮದುವೆಗೆ ನಿರ್ಧರಿಸಿದ್ದಾರೆ. ಮೂರು ವರ್ಷದ ಹಿಂದೆ ಲಿಂಗ ಪರಿವರ್ತನೆಗೆಂದು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಈ ಭೇಟಿ ಬಳಿಕ ಪ್ರೀತಿಗೆ ತಿರುಗಿ ಈಗ ಮದುವೆ ನಿರ್ಧಾರಕ್ಕೆ ಇವರು ಬಂದಿದ್ದಾರೆ. ಆದರೆ, ಇದರ ಬೆನ್ನಲ್ಲೇ ಇವರಿಗೆ ಬೆದರಿಕೆ ಕರೆ ಬರುತ್ತಿದೆಯಂತೆ.

ಆರವ್​ ಮೊದಲ ಹೆಸರು ಬಿಂದು ಮತ್ತು ಕೃಷ್ಣನ್​​ ಮೊದಲ ಹೆಸರು ಚಂದು. ಹೆಣ್ಣು ಗಂಡಾಗಿ ಬೆಳೆದಿದ್ದ ಇವರು ಪರಸ್ಪರ ಗಂಡು ಹೆಣ್ಣಾಗಿ ಪರಿವರ್ತನೆಯಾಗಿದ್ದರು. ಇದಾದ ಬಳಿಕ ಇವರು ತಮ್ಮ ಪ್ರೀತಿಯನ್ನು ಮದುವೆ ಮಟ್ಟಕ್ಕೆ ಕೊಂಡು ಹೋಗಿದ್ದರು. ಇದು ಕೇರಳದ ಮೊದಲ ಲಿಂಗ ಪರಿವರ್ತಿತ ಜೋಡಿಯ ಮದುವೆ ಆಗಿದೆ. ಸೆಪ್ಟೆಂಬರ್​ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂದು ಗೊತ್ತಾಗಿದೆ. ಇವರ ಮದುವೆಗೆ ಅರವ್ ಕಡೆಯವರಿಂದ ಸಮ್ಮತಿ ಇದ್ದು, ಸಂಯುಕ್ತ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದೂ ಗೊತ್ತಾಗಿದೆ.

About sudina

Check Also

ಶಾರ್ಜಾ ಏರ್ ಪೋರ್ಟ್‍ನಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕಿಂಗ್ ಪ್ಲೇಸ್…

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಮಹಿಳೆಯರ ರಕ್ಷಣೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಸಲುವಾಗಿ ಶಾರ್ಜಾ …

Leave a Reply

Your email address will not be published. Required fields are marked *

error: Content is protected !!