Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಡೋಂಗಿ ಬಾಬಾನ ಚಳಿ ಬಿಡಿಸಿದ ವಿರಾಜಪೇಟೆಯ ಕೊಂಡಂಗೇರಿ ಜನ

ಡೋಂಗಿ ಬಾಬಾನ ಚಳಿ ಬಿಡಿಸಿದ ವಿರಾಜಪೇಟೆಯ ಕೊಂಡಂಗೇರಿ ಜನ

ಕೊಡಗು ಪ್ರತಿನಿಧಿ ವರದಿ

ಮಡಿಕೇರಿ : ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ವಂಚಿಸುವವರ ಸಂಖ್ಯೆ ಈಗ ಅಧಿಕವಾಗುತ್ತಿದೆ. ಅಂತೆಯೇ ನಾನೊಬ್ಬ ಅತಿಮಾನುಷ ಶಕ್ತಿ ಇರುವ ವ್ಯಕ್ತಿ ಎಂದು ಪೋಸ್ ಕೊಡುತ್ತಾ ಜನರಿಗೆ ವಂಚನೆ ಮಾಡುತ್ತಿದ್ದ ವಂಚಕ ಬಾಬಾನೊಬ್ಬನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ನಡೆದಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮದಲ್ಲಿ…

ಈ ಗ್ರಾಮಕ್ಕೆ ಕಳೆದ ಮೂರು ತಿಂಗಳ ಹಿಂದೆ ಇಕ್ಬಾಲ್ ಬಾಬಾ ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡ ವ್ಯಕ್ತಿ ಬಂದಿದ್ದ. ಅಲ್ಲದೆ, ಇಲ್ಲಿನ ಬಾಡಿಗೆ ಕಟ್ಟಡದಲ್ಲಿ ಜನರಿಗೆ ವಂಚಿಸುವ ಕೆಲಸವನ್ನು ಈತ ಮಾಡುತ್ತಿದ್ದ… ಈತನ ಬಳಿ ಬರುತ್ತಿದ್ದವರು ಬಹುತೇಕ ಮಹಿಳೆಯರೇ… ಇದು ಈತನಿಗೆ ಲಾಭವೂ ಆಗಿತ್ತು. ಕಷ್ಟ ಹೇಳಿಕೊಂಡು ಬರುವ ಮಹಿಳೆಯರ ಮೈ ಮುಟ್ಟಿ ಈತ ತನ್ನ ಕಾಮುಕತನ ಪ್ರದರ್ಶಿಸುತ್ತಿದ್ದ.

ಈತನ ಈ ದುರ್ಬುದ್ಧಿ ಅರಿತ ಕೊಂಡಂಗೇರಿ ನಿವಾಸಿಗಳು ಈ ಬಾಬಾನಿದ್ದ ಕೋಣೆಗೆ ಹೋಗಿ ಚೆನ್ನಾಗಿ ಮಂಗಳಾರತಿ ಮಾಡಿದ್ದಾರೆ. ಜನರ ಕೈಯಲ್ಲಿ ಹಣ್ಣುಗಾಯಿ ನೀರುಗಾಯಿ ಆಗಿದ್ದ ಈತನನ್ನು ಬಳಿಕ ಸಿದ್ದಾಪುರ ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೂಡಾ ಮುಂದುವರಿದಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!