Thursday , December 14 2017
Home / Interval / ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು ಮಗು : ತಂದು ಸಾಕಿದರು ಆ ಬಾಲಿವುಡ್​ ಸ್ಟಾರ್​ : ಈಗ ಆಕೆ ಹೀರೋಯಿನ್​​…!

ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು ಮಗು : ತಂದು ಸಾಕಿದರು ಆ ಬಾಲಿವುಡ್​ ಸ್ಟಾರ್​ : ಈಗ ಆಕೆ ಹೀರೋಯಿನ್​​…!

ಮುಂಬೈ : ಬದುಕು ಯಾವ ರೀತಿಯಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳೋದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಸಾಕ್ಷಿ ಈ ಘಟನೆ. ಆ ಹೆಣ್ಣು ಮಗು ಕಸದ ತೊಟ್ಟಿಯಲ್ಲಿ ಬಿದ್ದಿತ್ತು. ಇರುವೆಗಳೆಲ್ಲಾ ಮುತ್ತುಕೊಳ್ಳುವುದಕ್ಕೆ ಆರಂಭಿಸಿದ್ದವು. ಸ್ವಲ್ಪ ಹೊತ್ತಾದರೆ ಆ ಕಂದ ನಾಯಿಗಳ ಪಾಲಾಗುತ್ತಿತ್ತೋ ಏನೋ.. ಆದರೆ, ಹಾಗೆ ಆಗಲಿಲ್ಲ. ಮಗುವಿನ ಅಳುವನ್ನು ಕೇಳಿ ಅಲ್ಲಿಗೆ ಬಂದರು ಒಬ್ಬ ಸ್ಟಾರ್​. ಅವರು ಬೇರೆ ಯಾರು ಅಲ್ಲ. ಬಾಲಿವುಡ್​ ನಟ ಮಿಥುನ್​ ಚಕ್ರವರ್ತಿ.

ಆ ಹೆಣ್ಣುಮಗುವನ್ನು ಯಾರು ಎಸೆದು ಹೋಗಿದ್ದೆಂದು ಗೊತ್ತಿಲ್ಲ. ಈ ಸುದ್ದಿ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಓದಿ ಅಲ್ಲಿಗೆ ಬಂದ ಮಿಥುನ್ ಚಕ್ರವರ್ತಿ ಅಳುತ್ತಿದ್ದ ಕಂದನ ಕೆನ್ನೆ ಸವರಿದರು. ಮುತ್ತಿಕ್ಕಿದರು. ಮನೆಗೆ ಬಂದು ಸಾಕಿದರು. ಕಾನೂನು ಪ್ರಕಾರ ಮಗುವನ್ನು ದತ್ತು ತೆಗೆದುಕೊಂಡರು. ತನ್ನ ಮೂವರು ಗಂಡು ಮಕ್ಕಳಿಗೆ ತಂಗಿಯಾಗಿ ಆ ಹುಡುಗಿ ಬೆಳೆದಳು.. ಆಕೆಯೇ ದಿಶಾನಿ..

ಈ ದಿಶಾನಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಸೌಂದರ್ಯದ ಮೂಲಕವೇ ಮನೆ ಮಾತಾಗಿದ್ದಾಳೆ. ಎಲ್ಲರ ಗಮನ ಸೆಳೆದಿರುವ ಸ್ಟಾರ್ ಕಿಡ್​ಗಳಲ್ಲಿ ಈ ದಿಶಾನಿ ಕೂಡಾ ಒಬ್ಬಳು.

ದತ್ತು ಮಗಳು ಎಂಬ ಭಾವನೆ ಬಾರದೇ ಇರುವ ರೀತಿಯಲ್ಲಿ ದಿಶಾನಿಯನ್ನು ಸಾಕಿದ್ದಾರೆ ಮಿಥುನ್ ಚಕ್ರವರ್ತಿ. ಈಗ ಬೇರೆ ಸ್ಟಾರ್ ಕಿಡ್​ ಗಳಂತೆ ದಿಶಾನಿ ಕೂಡಾ ಬೆಳ್ಳಿತೆರೆಗೆ ಬರಲು ಕಾತರದಿಂದ ಕಾಯುತ್ತಿದ್ದಾಳೆ. ಸದ್ಯ ನ್ಯೂಯಾರ್ಕ್​ನಲ್ಲಿ ನಟನಾ ತರಬೇತಿ ಪಡೆಯುತ್ತಿರುವ ದಿಶಾನಿ ಸದ್ಯದಲ್ಲೇ ಚಿತ್ರಗಳಲ್ಲಿ ನಟಿಸಲು ಸಿದ್ಧವಾಗುತ್ತಿದ್ದಾಳೆ.

ಬಾಲಿವುಡ್​ನಲ್ಲಿ ದತ್ತು ತೆಗೆದುಕೊಂಡ ಸ್ಟಾರ್​ಗಳು ಹಲವರಿದ್ದಾರೆ. ಇತ್ತೀಚೆಗಷ್ಟೇ ಸನ್ನಿ ಲಿಯೋನ್ ದಂಪತಿ ಒಂದು ಹೆಣ್ಣುಮಗುವನ್ನು ದತ್ತು ತೆಗೆದುಕೊಂಡಿತ್ತು. ಇನ್ನು, 1995ರಲ್ಲಿ ನಟಿ ರವೀನಾ ಟಂಡನ್ ಕೂಡಾ ಇಬ್ಬರು ಹೆಣ್ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. ಸುಶ್ಮಿತಾ ಸೇನ್​ ಕೂಡಾ ಮಗಳನ್ನು ಸಾಕುತ್ತಿದ್ದಾರೆ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್​ ಕೂಡಾ ದತ್ತು ಮಗಳೇ..

About sudina

Check Also

ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಅದು 2004ರ ಸಮಯ. ನಿರ್ದೇಶಕ ಡೇವಿಡ್ ಧವನ್ ಒಂದು ಸಿನೆಮಾ ತೆಗೆದರು. ಆ ಸಿನೆಮಾದ ಟೈಟಲ್ `ಮುಜ್‍ಸೇ ಶಾದಿ ಕರೋಗಿ’. …

Leave a Reply

Your email address will not be published. Required fields are marked *

error: Content is protected !!