Thursday , December 14 2017
Home / News NOW / ಮಹಡಿಯಿಂದ ಮಗಳನ್ನು ಎರಡೆರಡು ಸಲ ಎಸೆದು ಕೊಂದ ತಾಯಿ…!

ಮಹಡಿಯಿಂದ ಮಗಳನ್ನು ಎರಡೆರಡು ಸಲ ಎಸೆದು ಕೊಂದ ತಾಯಿ…!

ಬೆಂಗಳೂರು : ತಾಯಿಯೇ ತನ್ನ ಒಂಭತ್ತು ವರ್ಷದ ಮಗಳನ್ನು 3ನೇ ಮಹಡಿಯಿಂದ ಎರಡೆರಡು ಸಲ ಎಸೆದು ಕೊಂದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಜೆ.ಪಿ.ನಗರದ ಜರಗನಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಶ್ರೇಯಾ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ ಸುಮಾರು 3.45ಕ್ಕೆ ಈ ಘಟನೆ ನಡೆದಿದ್ದು, ಈ ದೃಶ್ಯವನ್ನು ನೋಡಿದ ಸ್ಥಳೀಯರು ತಾಯಿ ಸತಿ ಸರ್ಕಾರ್​​ ರನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಚೆನ್ನಾಗಿ ಥಳಿಸಿ ಪುಟ್ಟೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಒಂದು ಸಲ ಮಗಳನ್ನು ಮೇಲಿಂದ ಎಸೆದ ಸತಿ ಸರ್ಕಾರ್​ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುತ್ರಿಯನ್ನು ಎರಡನೇ ಸಲ ಎತ್ತಿಕೊಂಡು ಬಂದು ಮೇಲಿಂದ ಎಸೆದಿದ್ದಾಳೆ. ಇದನ್ನು ಸ್ಥಳೀಯರು ಪ್ರಶ್ನಿಸಿದ್ದಾಗ ನಿಮ್ಮ ಕೆಲ್ಸ ನೀವು ನೋಡಿಕೊಳ್ಳಿ ಎಂದು ಬೈದು ಹೋಗಿದ್ದಾಳೆ ಎಂದು ಗೊತ್ತಾಗಿದೆ.

ಮೂಲತಃ ಪಶ್ಚಿಮ ಬಂಗಾಳದ ಸತಿ ಎಂಟು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಇವರ ಪತಿ ಕಂಚನ್ ಸರ್ಕಾರ್. ಪ್ರೀತಿಸಿ ಮದುವೆಯಾಗಿದ್ದ ಇವರು ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಂಬಂಧಿಕರ ಸಂಪರ್ಕವನ್ನೂ ತೊರೆದಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಬಳಿಕ ಜಗಳ ಮಾಡಿಕೊಳ್ಳಲು ಶುರು ಮಾಡಿದ್ದರು. ಇದರಿಂದ ಎರಡು ವರ್ಷದ ಹಿಂದೆ ಪತ್ನಿಯನ್ನು ತೊರೆದು ಕಾಂಚನ್​​ ಇಂದಿರಾ ನಗರದ ತಮ್ಮ ಕಂಪೆನಿಗೆ ಹತ್ತಿರ ನೆಲೆಸಿದ್ದರು. ತಿಂಗಳಿಗೆ ಒಂದು ಸಲ ಬಂದು ಮನೆ ಖರ್ಚಿಗೆ ದುಡ್ಡನ್ನೂ ಕೊಟ್ಟು ಹೋಗುತ್ತಿದ್ದರು.

ಇನ್ನು, ಆರೋಪಿ ಸತಿ ಶಾಲಾ ಶಿಕ್ಷಕಿಯಾಗಿದ್ದು, ಎರಡು ವರ್ಷಗಳ ಹಿಂದೆ ಕೆಲಸವನ್ನೂ ಬಿಟ್ಟಿದ್ದರು ಎಂದು ಗೊತ್ತಾಗಿದೆ. ಈಕೆ ಮಾನಸಿಕ ಅಸ್ವಸ್ಥೆ ಎಂದೂ ಶಂಕಿಸಲಾಗಿದೆ. ಇನ್ನು, ಮೃತ ಶ್ರೇಯಾಗೆ ಮಾತು ಬರುತ್ತಿರಲಿಲ್ಲ. ಮಗಳ ಸಮಸ್ಯೆ ಗುಣಮುಖವಾಗದೇ ಇದ್ದ ಹಿನ್ನೆಲೆಯಲ್ಲಿ ಸತಿ ಕೂಡಾ ಖಿನ್ನತೆಗೊಳಗಾಗಿದ್ದಳಂತೆ. ಅಲ್ಲದೆ, ಮಗಳ ಮೇಲೂ ಹಲವು ಸಲ ಹಲ್ಲೆ ಕೂಡಾ ಮಾಡಿದ್ದಳಂತೆ.

ಇನ್ನು, ಮಗಳು ಸಾವನ್ನಪ್ಪಿದ ಕೂಡಲೇ ಸಹಜ ಸ್ಥಿತಿಗೆ ಬಂದ ಸತಿ, ಮಗಳನ್ನು ಅಪ್ಪಿಕೊಂಡು ಜೋರಾಗಿ ಅತ್ತು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದಳಂತೆ. ಆಗ ಸ್ಥಳೀಯರು ಈಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.

About sudina

Check Also

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್​ ಬೇಗ್​ ಕೀಳುಮಟ್ಟದ ಪದ ಪ್ರಯೋಗ : ಬಿಜೆಪಿ ಆಕ್ರೋಶ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಚಿವ ರೋಷನ್ ಬೇಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. …

Leave a Reply

Your email address will not be published. Required fields are marked *

error: Content is protected !!