Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ತೆರೆಗೆ ಬರಲು ಸಜ್ಜಾಗಿದೆ ಮತ್ತೆರಡು ಪರಭಾಷಾ ಚಿತ್ರಗಳು…?

ತೆರೆಗೆ ಬರಲು ಸಜ್ಜಾಗಿದೆ ಮತ್ತೆರಡು ಪರಭಾಷಾ ಚಿತ್ರಗಳು…?

ಬೆಂಗಳೂರು : ಸ್ಯಾಂಡಲ್​ವುಡ್​ಗೆ ಡಬ್ಬಿಂಗ್ ಬೇಕಾ ಬೇಡವಾ ಎಂಬುದು ತುಂಬಾ ಹಳೆಯ ಚರ್ಚೆ. ಈ ಚರ್ಚೆಯ ನಡುವೆಯೇ ಆಗೊಮ್ಮೆ ಈಗೊಮ್ಮೆ ಕೆಲವೊಂದು ಡಬ್ಬಿಂಗ್ ಚಿತ್ರಗಳು ರಿಲೀಸ್ ಆಗುತ್ತಿವೆ. ಈಗ ಮತ್ತೆರಡು ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್​ ಆಗಿ ತೆರೆಗೆ ಬರಲು ಸಜ್ಜಾಗಿವೆ. ಪರಿಣಾಮ, ಡಬ್ಬಿಂಗ್ ವಿಚಾರದಲ್ಲಿ ಮತ್ತೊಂದು ಸುತ್ತಿನ ಡಿಶುಂ ಡಿಶುಂ ಶುರುವಾಗಿದೆ.

ಸ್ಯಾಂಡಲ್​ವುಡ್​ಗೆ ಡಬ್ಬಿಂಗ್​ ಬೇಕಾ ಬೇಡ್ವಾ…? ಇದು ದೊಡ್ಡ ಚರ್ಚಾ ವಿಷಯ… ಸಿನಿಲೋಕದ ಬಹುತೇಕರು ಡಬ್ಬಿಂಗ್​ಗೆ ವಿರೋಧ ಇದ್ದಾರೆ. ಕನ್ನಡ ಪರ ಸಂಘಟನೆಗಳೂ ಡಬ್ಬಿಂಗ್ ಯಾವುದೇ ಕಾರಣಕ್ಕೂ ಬೇಡ ಎಂದೂ ಹೇಳುತ್ತಿವೆ. ಇದರ ನಡುವೆ, ಡಬ್ಬಿಂಗ್ ಬೇಕು ಎಂದು ಹೇಳುವವರೂ ಇದ್ದಾರೆ…

ಡಬ್ಬಿಂಗ್ ಬೇಡ ಎಂದು ದೊಡ್ಡ ಮಟ್ಟದಲ್ಲೇ ಹೋರಾಟ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಪರ ವಿರೋಧದ ಚರ್ಚೆ ದೊಡ್ಡದಾಗಿಯೇ ಸೌಂಡ್ ಮಾಡುತ್ತಿದೆ. ಈ ನಡುವೆ, ಮತ್ತೆರಡು ಚಿತ್ರಗಳು ಕನ್ನಡದಲ್ಲಿ ಡಬ್​ ಆಗಿ ತೆರೆಗೆ ಬರಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ…

ಈ ಹಿಂದೆ ತಮಿಳಿನ ನಟ ಅಜಿತ್​ ಅಭಿನಯದ ಎನ್ನೈ ಅರಿಂದಾಲ್​​​​ ಎಂಬ ಚಿತ್ರ ಸತ್ಯದೇವ್​ ಐಪಿಎಸ್​ ಎಂಬ ಹೆಸರಿನಲ್ಲಿ ರಿಲೀಸ್ ಆಗಿತ್ತು.. ಸತ್ಯದೇವ್​ ಐಪಿಎಸ್​ಗೂ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಈ ವಿರೋಧದ ನಡುವೆಯೂ ರಿಲೀಸ್ ಆದ ಚಿತ್ರ ಅಷ್ಟೇನು ಒಳ್ಳೆಯ ಸಾಧನೆ ಮಾಡಲಿಲ್ಲವೆಂಬುದು ಬೇರೆ ವಿಷಯ… ಈ ಸೋಲಿಗೆ ಕಾರಣ ಹಲವಿರಬಹುದು. ಅದೀಗ ಅಪ್ರಸ್ತುತ. ಈಗ ಮತ್ತೆ ಇದೇ ಅಜಿತ್ ಅಭಿನಯದ ಆರಂಭಂ ಚಿತ್ರ ಕನ್ನಡಕ್ಕೆ ಡಬ್​ ಆಗಿದೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ಧೀರ ಎಂಬ ಹೆಸರಿನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆಯಂತೆ… ಹೀಗಾಗಿ, ಮತ್ತೊಂದು ಸುತ್ತಿನ ಡಬ್ಬಿಂಗ್ ಸಮರಕ್ಕೆ ಇದು ವೇದಿಕೆಯಾಗುವುದಂತೂ ಗ್ಯಾರಂಟಿ…

ಇನ್ನೊಂದ್ಕಡೆ, ಹಾಲಿವುಡ್​ನ ಚಿತ್ರವೂ ಕನ್ನಡದಲ್ಲಿ ಸದ್ದಿಲ್ಲದೆ ರೆಡಿ ಆಗಿದೆ. ಅದೇ ಫಾಸ್ಟ್​ ಆಂಡ್​ ಫೂರಿಯಸ್​ 8… ಈಗಾಗಲೇ ಮುಂಬೈಯಲ್ಲಿ ರಿಲೀಸ್ ಆಗಿರುವ ಈ ಚಿತ್ರ ಈಗ ಕರ್ನಾಟಕದಲ್ಲೂ ಬಿಡುಗಡೆಗೆ ಸಜ್ಜಾಗಿದೆ…

ಈ ಚಿತ್ರಕ್ಕೆ ವೇಗ ಮತ್ತು ಉದ್ವೇಗ 8 ಎಂದು ಹೆಸರಿಡಲಾಗಿದೆ… ಸೆಪ್ಟೆಂಬರ್​ 1ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಟ್ಟಿರುವ ಪ್ರೋಮೋದಲ್ಲೂ ಸೆಪ್ಟೆಂಬರ್ 1ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಇದೆ.

ಮುಂಬೈಯಲ್ಲಿ ಮೊದಲು ಕನ್ನಡದಲ್ಲಿ ಡಬ್​ ಆದ ಸಿನೆಮಾ ಇದು… ಅಲ್ಲಿ ಈ ಸಿನೆಮಾ ಏಪ್ರಿಲ್ ತಿಂಗಳಿನಲ್ಲೇ ರಿಲೀಸ್ ಕೂಡಾ ಆಗಿತ್ತು. ತೀವ್ರ ವಿರೋಧದ ನಡುವೆಯೂ ಡಬ್ಬಿಂಗ್​ ಚಿತ್ರಗಳು ಬರಲು ಸಜ್ಜಾಗಿವೆ. ಹಾಗಾಗಿ, ಇನ್ನೊಂದು ಸುತ್ತಿನ ಸಮರಕ್ಕೂ ಇದು ವೇದಿಕೆಯನ್ನು ಸಜ್ಜು ಮಾಡಿದೆ ಎಂದರೆ ಖಂಡಿತಾ ತಪ್ಪಲ್ಲ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!