Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ಗಣೇಶೋತ್ಸವ ನೆಪದಲ್ಲಿ ನಂಗಾನಾಚ್​ : ಮಲೈ ಮಹದೇಶ್ವರನ ಭಕ್ತರ ಆಕ್ರೋಶ

ಗಣೇಶೋತ್ಸವ ನೆಪದಲ್ಲಿ ನಂಗಾನಾಚ್​ : ಮಲೈ ಮಹದೇಶ್ವರನ ಭಕ್ತರ ಆಕ್ರೋಶ

ಚಾಮರಾಜನಗರ : ಇತಿಹಾಸ ಪ್ರಸಿದ್ಧ ಮಲೈ ಮಹದೇಶ್ವರ ಬೆಟ್ಟದಲ್ಲಿ ಗಣಪತಿ ವಿಸರ್ಜನೆ ಪ್ರಯುಕ್ತ ನಡೆದ ರಸ ಮಂಜರಿ ಕಾರ್ಯಕ್ರಮದಲ್ಲಿ ನಂಗಾನಾಚ್​ ನಡೆದಿದೆ. ಹುಡುಗಿಯರೆಲ್ಲಾ ಅರೆಬರೆ ಬಟ್ಟೆ ತೊಟ್ಟು ಇಲ್ಲಿ ಕುಣಿದಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಮಹದೇಶ್ವರ ಬೆಟ್ಟ ನೌಕರರ ಸಂಘ ಹಾಗೂ ಪ್ರಾಧಿಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಬೆಂಗಳೂರಿನಿಂದ ಬಂದಿದ್ದ ಹುಡುಗಿಯರ ತಂಡ ಅರೆಬೆತ್ತಲೆ ಬಟ್ಟೆ ಅಶ್ಲೀಲವಾಗಿ ಕುಣಿದಿದ್ದು ಮಲೈ ಮಹದೇಶ್ವರ ಭಕ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ದೇವಾಲಯದ ಆವರಣದಲ್ಲೇ ಈ ಕಾರ್ಯಕ್ರಮ ನಡೆದಿದೆ. ಹೀಗಾಗಿ, ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಒತ್ತಾಯಿಸಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!