Friday , April 20 2018
Home / Earth / ಕರ್ನಾಟಕದಲ್ಲಿ ಪ್ರತೀ ತಿಂಗಳು ಕನಿಷ್ಠ ಮೂವರು ಹುಲಿ- ಆನೆಗೆ ಬಲಿ…!

ಕರ್ನಾಟಕದಲ್ಲಿ ಪ್ರತೀ ತಿಂಗಳು ಕನಿಷ್ಠ ಮೂವರು ಹುಲಿ- ಆನೆಗೆ ಬಲಿ…!

ಬೆಂಗಳೂರು : ಕರ್ನಾಟಕದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಣ ಸಂಘರ್ಷ ಅಧಿಕವಾಗುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಮೂವರು ಹುಲಿ ಮತ್ತು ಆನೆಗೆ ಬಲಿಯಾಗಿದ್ದಾರಂತೆ. ಕಳೆದ ನಾಲ್ಕು ವರ್ಷದಿಂದ ಇದುವರಗೆ ಸುಮಾರು 146 ಮಂದಿ ಹುಲಿ ಮತ್ತು ಆನೆಗೆ ಬಲಿಯಾಗಿದ್ದಾಗಿ ಅಂಕಿ ಅಂಶಗಳು ಹೇಳುತ್ತವೆ. ಈ ಅಂಕಿ ಅಂಶಗಳು ನಿಜವಾಗಿಯೂ ಭೀತಿ ಮೂಡಿಸುವಂತಿದೆ.

ಆದರೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಗಿರುವ ಸಾವು ನೋವುಗಳು ಕಡಿಮೆ. ಈ ಅವಧಿಯಲ್ಲಿ ಈ ಎರಡೂ ರಾಜ್ಯದಲ್ಲಿ ಕ್ರಮವಾಗಿ 367 ಮತ್ತು 241 ಜನ ಹುಲಿ ಮತ್ತು ಆನೆಗಳಿಗೆ ಬಲಿಯಾಗಿದ್ದಾರೆ. ಈ ಎರಡು ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ಸಂಖ್ಯೆ ಕಡಿಮೆ. ಆದರೂ ಇದು ಗಂಭೀರವಾಗಿ ಚಿಂತಿಸುವಂತಹ ವಿಚಾರವೇ ಆಗಿದೆ. ಯಾಕೆಂದರೆ, ಪ್ರತಿವರ್ಷ ಪ್ರಾಣಿಗಳ ಕಾರಣದಿಂದ ಬಲಿಯಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ.

ಅದರಲ್ಲೂ ಆನೆಗಳ ದಾಳಿಯಿಂದ ಸಾವನ್ನಪ್ಪಿರುವವರ ಸಂಖ್ಯೆಯೇ ಅಧಿಕ. ಲಭ್ಯ ಮಾಹಿತಿ ಪ್ರಕಾರ ಈಗ ದಾಖಲಾಗಿರುವ 146 ಸಂಖ್ಯೆಯಲ್ಲಿ 135 ಮಂದಿಯ ಸಾವಿಗೆ ಕಾರಣವಾಗಿದ್ದು ಕಾಡಾನೆಗಳು. ಬಾಕಿ ಉಳಿದ 11 ಮಂದಿ ಹುಲಿಗೆ ಬಲಿಯಾಗಿದ್ದಾರೆ.

 

 

 

 

 

 

 

 

About sudina

Check Also

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ …

Leave a Reply

Your email address will not be published. Required fields are marked *

error: Content is protected !!