Saturday , January 19 2019
ಕೇಳ್ರಪ್ಪೋ ಕೇಳಿ
Home / Mumbai Mail / ತಾಯಿಯನ್ನು ಕೊಂದು ಹೃದಯವನ್ನು ಚಟ್ನಿಯೊಂದಿಗೆ ತಿಂದ…!

ತಾಯಿಯನ್ನು ಕೊಂದು ಹೃದಯವನ್ನು ಚಟ್ನಿಯೊಂದಿಗೆ ತಿಂದ…!

ಕೊಲ್ಹಾಪುರ (ಮಹಾರಾಷ್ಟ್ರ) : ಈ ಸುದ್ದಿಯನ್ನು ನಂಬುವುದು ಕಷ್ಟ. ಆದರೆ, ಇಂತಹದ್ದೊಂದು ಘಟನೆ ಆಗಿದ್ದಂತೂ ಸತ್ಯ. ಕಂಠಮಟ್ಟ ಕುಡಿದು ಬಂದ ಮಗನೊಬ್ಬ ತಾಯಿಗೆ ಮನ ಬಂದಂತೆ ಥಳಿಸಿ ಕೊಂದಿದ್ದಾನೆ. ಕೊಂದ ಬಳಿಕ ಆಕೆಯ ಹೃದಯವನ್ನು ಬಗೆದು ಅದನ್ನು ಚಟ್ನಿಯೊಂದಿಗೆ ತಿಂದಿದ್ದಾನೆ. ಇಂತಹ ವಿಲಕ್ಷಣ ಘಟನೆ ನಡೆದಿರುವುದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ.

ಆರೋಪಿಯನ್ನು ದಿನಗೂಲಿ ನೌಕರ ಸುನಿಲ್ ಕುಚಕರ್ಣಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗನಿಂದಲೇ ಕೊಲೆಯಾದ ನತದೃಷ್ಟ ತಾಯಿಯನ್ನು 65 ವರ್ಷದ ಯೆಲವ್ವಾ ಎಂದು ಗುರುತಿಸಲಾಗಿದೆ. ತಾಯಿಯನ್ನು ಕೊಂದು ಹೃದಯವನ್ನು ತಿಂದ ಬಳಿಕ ಆರೋಪಿ ಸುನಿಲ್ ರಕ್ತಸಿಕ್ತ ಕೈಯೊಂದಿಗೆ ಮನೆಯ ಹೊರಗೇ ಕುಳಿತಿದ್ದ ಎಂದು ಹೇಳಲಾಗುತ್ತಿದೆ.

ಆರೋಪಿ ಕುಡಿತದ ದಾಸ. ಈ ಘಟನೆ ನಡೆಯುವಾಗಲೂ ಈತ ಕುಡಿದ ಮತ್ತಿನಲ್ಲೇ ಇದ್ದ. ತಾಯಿ ಮಗನ ನಡುವೆ ಊಟದ ವಿಷಯದಲ್ಲಿ ಸದಾ ಜಗಳ ನಡೆಯುತ್ತಿದ್ದಂತೆ. ಈ ಘಟನೆ ನಡೆಯುವ ಮುನ್ನವೂ ಈತ ಪಕ್ಕದ ಮನೆಗೆ ಹೋಗಿ ಊಟವನ್ನೂ ಕೇಳಿದ್ದನಂತೆ. ಆದರೆ, ಪಕ್ಕದ ಮನೆಯಲ್ಲಿ ಊಟ ಸಿಕ್ಕಿರಲಿಲ್ಲ. ಮರಳಿ ಮನೆಗೆ ಬಂದರೆ ತಾಯಿ ಮಗನ ನಡುವೆ ಇದೇ ಊಟದ ವಿಚಾರದಲ್ಲಿ ಜಗಳ ನಡೆದಿದೆ. ಈ ವೇಳೆ, ಸುನಿಲ್ ತಾಯಿಯನ್ನು ಕೊಂದಿದ್ದಾನೆ. ಬಳಿಕ ಹೃದಯ ಹೊರತೆಗೆದು ಪ್ಲೇಟ್‍ನಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮನೆಗೆ ಬಂದಾಗ ಪ್ಲೇಟಿನಲ್ಲಿ ಹೃದಯದ ತುಂಡು ಮತ್ತು ಚಟ್ನಿ ಕೂಡಾ ಹಾಗೆಯೇ ಇತ್ತು. ಪ್ಲೇಟಿನ ಪಕ್ಕದಲ್ಲಿ ಪೆಪ್ಪರ್ ಪೌಡರ್ ಕೂಡಾ ಸಿಕ್ಕಿದೆ. ಹೇಗಿದೆ ಅಲ್ವಾ…? ಇಂತಹ ವಿಲಕ್ಷಣ ಮನಸ್ಥಿತಿಯವರೂ ಇರುತ್ತಾರಾ…? ಆದರೆ, ಸದ್ಯ ನಾವು ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಹಾಗಿಲ್ಲ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವುದರಿಂದ ವಿಚಾರಣೆ ಮುಗಿಯುವ ವರೆಗೆ ಕಾಯಬೇಕಷ್ಟೇ…

image courtesy :daily bhaskar

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!