Saturday , February 16 2019
ಕೇಳ್ರಪ್ಪೋ ಕೇಳಿ
Home / Sandalwood / ಕೆಜಿಎಫ್​ನಲ್ಲಿ ಯಶ್​ ಜಬರ್ದಸ್ತ್​ ಲುಕ್​ : ಹೈಪ್​ ಕ್ರಿಯೇಟ್ ಮಾಡಿದೆ ಪೋಸ್ಟರ್​

ಕೆಜಿಎಫ್​ನಲ್ಲಿ ಯಶ್​ ಜಬರ್ದಸ್ತ್​ ಲುಕ್​ : ಹೈಪ್​ ಕ್ರಿಯೇಟ್ ಮಾಡಿದೆ ಪೋಸ್ಟರ್​

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​​​ ಜಬರ್ದಸ್ತ್​ ಆಗಿ ಬರಲು ಸಜ್ಜಾಗಿದ್ದಾರೆ. ಕೆಜಿಎಫ್​ ಚಿತ್ರ ಯಶ್​​ ಸಿನಿ ಜರ್ನಿಯಲ್ಲಿ ಮತ್ತೊಂದು ಮೈಲುಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಚಿತ್ರದ ಫಸ್ಟ್​ ಲುಕ್​ ಈಗಾಗಲೇ ರಿಲೀಸ್ ಆಗಿದ್ದು, ಯಶ್​ ಅಭಿಮಾನಿಗಳನ್ನು ಸಂಭ್ರಮದಲ್ಲಿ ಮುಳುಗಿಸಿದೆ…

ಕೆಜಿಎಫ್​ ಚಿತ್ರ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ… ಯಶ್​ ಸಿನಿ ಜರ್ನಿಯಲ್ಲಿ ಈ ಚಿತ್ರವೂ ಒಂದು ಮೈಲುಗಲ್ಲಾಗಲಿದೆ ಎಂಬ ಮಾತು ಈಗಾಗಲೇ ಕೇಳಿ ಬರುತ್ತಿದೆ… ಈ ಮಾತಿಗೆ ಸರಿಯಾಗಿ ಖದರ್​ ತೋರೋ ಚಿತ್ರದ ಪೋಸ್ಟರ್​ ಕೂಡಾ ರಿಲೀಸ್ ಆಗಿದೆ… ರಫ್​ ಆಂಡ್ ಟಫ್​ ಲುಕ್​ನಲ್ಲಿ ಯಶ್​​ ಇಲ್ಲಿ ಮಿಂಚುತ್ತಿದ್ದಾರೆ…

ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ ಸೌತ್​ ಇಂಡಿಯಾ ಫಿಲಂ ಇಂಡಸ್ಟ್ರಿಯಲ್ಲೇ ಕೆಜಿಎಫ್ ಹವಾ ತೋರೋದಕ್ಕೆ ಆರಂಭಿಸಿದೆ… ಯಾಕೆಂದರೆ, ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ. ದಕ್ಷಿಣ ಭಾರತದ ಇತರ ಮೂರು ಭಾಷೆಗಳಾದ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ. ಇನ್ನು, ಹಿಂದಿಯಲ್ಲೂ ಕೆಜಿಎಫ್​ ರೆಡಿಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಪಂಚ ಭಾಷೆಯಲ್ಲಿ ಯಶ್​​ ಮಿಂಚಲಿದ್ದಾರೆ… ಈಗಾಗಲೇ ಈ ಚಿತ್ರದ ಪೋಸ್ಟ್​ ಸಖತ್​ ಸೌಂಡ್ ಮಾಡುತ್ತಿದೆ. ಎರಡನೇ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ… ಕೆಜಿಎಫ್​ ಚಿತ್ರದಲ್ಲಿ ಯಶ್​ ಲುಕ್​ ಟಾಕ್​ ಆಫ್​ ದಿ ಟೌನ್ ಆಗಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರದ ಪೋಸ್ಟ್​ ಕೂಡಾ ರಿಲೀಸ್​ ಆಗಿದೆ…

ಯಶ್​ ಸಿನಿ ಕೆರಿಯರ್​​ನಲ್ಲಿ ಇದೊಂದು ದೊಡ್ಡ ಚಿತ್ರ… ಯಶ್​ ಅಭಿನಯದ ಅತೀ ಹೆಚ್ಚು ಬಜೆಟ್​ನಲ್ಲಿ ನಿರ್ಮಾಣವಾದ ಚಿತ್ರವೂ ಇದೆ… ಹೀಗಾಗಿಯೇ, ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡಾ ಹೆಚ್ಚಾಗಿದೆ… ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್​​​… ರಾಜಕುಮಾರ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ದುಡ್ಡು ಹಾಕಿದ್ದು, ಶ್ರೀನಿಧಿ ಶೆಟ್ಟಿ ಯಶ್​ಗೆ ನಾಯಕಿಯಾಗಿದ್ದಾರೆ…

ಈ ಚಿತ್ರದ ಶೂಟಿಂಗ್​ ಶೇಕಡಾ 50ರಷ್ಟು ಮುಗಿದಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್​ನಲ್ಲಿ ಯಶ್​ ರೆಟ್ರೊ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 70ರ ದಶಕದ ಲುಕ್​ನಲ್ಲಿ ಯಶ್​ ಮಿಂಚುತ್ತಿದ್ದಾರೆ… 70 ರ ದಶಕದ ಮತ್ತು 80ರ ದಶಕದ ಆರಂಭದ ದಿನಗಳ ಕತೆ ಈ ಚಿತ್ರದಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಇನ್ನು, ಸ್ಯಾಂಡಲ್​ವುಡ್​​ನ ಹಲವು ಪ್ರಖ್ಯಾತ ನಟರೂ ಈ ಚಿತ್ರದಲ್ಲಿ ಇರಲಿದ್ದಾರೆ. ನಟಿ ರಮ್ಯಾಕೃಷ್ಣ​ ಮತ್ತು ನಟ ನಾಸಿರ್​ ಮುಂದಿನ ದಿನಗಳಲ್ಲಿ ನಡೆಯುವ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಸದ್ಯ ಕೋಲಾರ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಶೂಟಿಂಗ್ ನಡೆದಿದೆ. ಮುಂದಿನ ಶೆಡೂಲ್ಡ್​​ನ ಶೂಟಿಂಗ್​​ಗಾಗಿ ಚಿತ್ರತಂಡ ಕೋಲ್ಕತ್ತಾ, ಮುಂಬೈ ಮತ್ತು ಲಡಾಕ್​ ಸೇರಿದಂತೆ ಹಲವು ಕಡೆ ಹಾರಲಿದೆ. ಒಟ್ಟಿನಲ್ಲಿ, ಯಶ್​ ಸೇರಿದಂತೆ ಅವರ ಅಭಿಮಾನಿಗಳು ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಪೋಸ್ಟರ್​ಗೇ ಯಶ್​ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!