Sunday , December 16 2018
ಕೇಳ್ರಪ್ಪೋ ಕೇಳಿ
Home / Gulf News / 104 ವರ್ಷದ ಹಿರಿಯಜ್ಜಿ ಸೌದಿ ದೊರೆಯ ಅತಿಥಿ

104 ವರ್ಷದ ಹಿರಿಯಜ್ಜಿ ಸೌದಿ ದೊರೆಯ ಅತಿಥಿ

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ಸೌದಿ ಅರೇಬಿಯಾ : ಈ ಬಾರಿಯ ಹಜ್​ ಯಾತ್ರೆಯಲ್ಲಿ 104 ವರ್ಷದ ಇಂಡೋನೇಷ್ಯಾದ ಅಜ್ಜಿ ಮರಿಯಾಹ್​​​​ ಮಾರ್ಘನಿ ಮೊಹಮ್ಮದ್​​​ ಪಾಲ್ಗೊಳ್ಳುತ್ತಿದ್ದಾರೆ. ಈ ಹಿರಿಯಜ್ಜಿಗೆ ಸೌದಿ ದೊರೆ ಸಲ್ಮಾನ್ ಬಿಗ್ ಅಬ್ದುಲ್​ ಅಜೀಜ್​ ಅಲ್​​​​ ಸೌದ್​​​ ಪ್ರೀತಿಯ ಆದರಾತಿಥ್ಯ ನೀಡುತ್ತಿದ್ದಾರೆ.

ಪವಿತ್ರ ಹಜ್​ ಯಾತ್ರೆಗೆ ಬರುವ ಈ ಅಜ್ಜಿ ಸೇರಿದಂತೆ ಅವರೊಂದಿಗೆ ಬರುವವರನ್ನು ತುಂಬಾ ಜಾಗರೂಕತೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುವಂತೆ ದೊರೆ ಸಲ್ಮಾನ್ ಸೂಚಿಸಿದ್ದಾರೆ. ಜೊತೆಗೆ, ವಿಐಪಿ ಲಿಸ್ಟ್​ನಲ್ಲಿ ಈ ಅಜ್ಜಿ ಹಾಗೂ ಅವರೊಂದಿಗೆ ಬರುವ ಇಬ್ಬರು ನೆರೆ ಮನೆಯವರ ಹೆಸರನ್ನೂ ಸೇರಿಸಲಾಗಿದೆ.

ದೊರೆ ಅವರ ಈ ಆದರಾತಿಥ್ಯಕ್ಕೆ ಕರಗಿ ನೀರಾಗಿರುವ ಈ ಹಿರಿಯಜ್ಜಿ, ದೊರೆ ಸಲ್ಮಾನ್ ಅವರ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!