Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special / 9ನೇ ಕ್ಲಾಸ್ ವಿದ್ಯಾರ್ಥಿಯಾಗಿದ್ದಾಗ ಮದುವೆಯಾಗಿದ್ದ ರಾಮ್​ ರಹೀಮ್​ ಸಿಂಗ್​​​…!

9ನೇ ಕ್ಲಾಸ್ ವಿದ್ಯಾರ್ಥಿಯಾಗಿದ್ದಾಗ ಮದುವೆಯಾಗಿದ್ದ ರಾಮ್​ ರಹೀಮ್​ ಸಿಂಗ್​​​…!

ನವದೆಹಲಿ : ಡೇರಾ ಸಜ್ಜಾ ಸೌದದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಂ ಸಿಂಗ್ ಈಗ ಬಂಧಿ. ಅನುಯಾಯಿಯೊಬ್ಬರ ಅತ್ಯಾಚಾರ ಕೇಸ್​​ನಲ್ಲಿ ಸಿಕ್ಕಿಬಿದ್ದ ಗುರ್ಮೀತ್​ಗೆ 20 ವರ್ಷಗಳ ಸಜೆ ಆಗಿದೆ. ಆದರೆ, ಈ ಇಡೀ ಸೀನ್​​ ನಲ್ಲಿ ಬಾಬಾ ಜೊತೆ ಕಾಣಿಸಿಕೊಳ್ಳುತ್ತಿರುವವಳು ದತ್ತು ಪುತ್ರಿ ಹನಿಪ್ರೀತ್ ಕೌರ್ ಮಾತ್ರ. ಆದರೆ, ಈತನ ಇಬ್ಬರು ಹೆಣ್ಣುಮಕ್ಕಳು, ಅಳಿಯಂದಿರುವ ಹೆಂಡತಿ ಇದುವರೆಗೆ ಎಲ್ಲಿಯೂ ಕಾಣಿಸಿಕೊಂಡಿದ್ದೇ ಇಲ್ಲ. ಬಾಬಾನ ಸಾಮಾಜ್ಯದಲ್ಲಿ ಪಾಪ ಇವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿದ್ದೇ ಇಲ್ಲ…!

ಬಾಬಾ ಗುರ್ಮೀತ್​ಗೆ ಪತ್ನಿ ಇದ್ದಾರೆ. ಆದರೆ, ಕ್ಯಾಮೆರಾ ಕಂಡರೆ ಇವರು ಬಲು ದೂರ. ಡೇರಾದಲ್ಲೇ ಇದ್ದರೂ ಇವರು ಬಾಹ್ಯವಾಗಿ ಕಾಣಿಸಿಕೊಂಡಿದ್ದೇ ಅಪರೂಪ. ಗುರ್ಮಿತ್​ ಪತ್ನಿಯ ಹೆಸರು ಹರ್ಜಿತ್ ಕೌರ್​. ಬಹಳ ಜನಕ್ಕೆ ಇವರು ಗುರ್ಮೀತ್ ಪತ್ನಿ ಎಂಬ ವಿಷಯವೇ ಗೊತ್ತಿಲ್ಲ…!

ಹೆತ್ತವರಿಗೆ ಗುರ್ಮೀತ್ ಒಬ್ಬನೇ ಮಗ. ಒಂಭತ್ತನೇ ಕ್ಲಾಸ್ ತನಕ ಓದಿದ್ದ ಗುರ್ಮಿತ್ ಬಳಿಕ ತಂದೆಯೊಂದಿಗೆ ಡೇರಾವನ್ನು ಸೇರಿಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಗುರ್ಮೀತ್​ ಹರ್ಜಿತ್ ಕೌರ್​ ಅವರನ್ನು ವರಿಸಿದ. ಬಳಿಕ ಮಗ ಜಸ್ಮೀತ್ ಹುಟ್ಟಿದ. ನಂತರ ಹರ್ಜಿತ್ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಚರಣ್​ಪ್ರೀತ್ ಮತ್ತು ಅಮರ್​ಪ್ರೀತ್ ಇವರ ಹೆಸರು. ಈತನ ಮೂರನೇ ಮಗಳು ಹನಿಪ್ರೀತ್ ಕೌರ್​ ದತ್ತು ಪುತ್ರಿ. ಫರೀದಾಬಾದ್​ನ ಈಕೆಯ ಮೊದಲ ಹೆಸರು ಪ್ರಿಯಾಂಕಾ. ಬಳಿಕ ಗುರ್ಮೀತ್​ ಈಕೆಯ ಹೆಸರನ್ನು ಹನಿಪ್ರೀತ್ ಕೌರ್ ಎಂದು ಬದಲಾಯಿಸಿದ್ದ.

ಈತನ ತಾಯಿ ನಸೀಬ್ ಕೌರ್ ಕೂಡಾ ಡೇರಾದಲ್ಲಿ ವಾಸಿಸುತ್ತಿದ್ದು,ಇಲ್ಲಿನ ದೈನಂದಿನ ಕೆಲಸಕಾರ್ಯದಲ್ಲಿ ಸದಾ ತೊಡಗಿಕೊಂಡಿರುತ್ತಾರೆ. ಆದರೆ, ಇವರೆಲ್ಲಾ ಇಷ್ಟು ದಿನ ಬಹಿರಂಗವಾಗಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ ಅಂದರೆ ಕಡಿಮೆ. ಈಗ ಗುರ್ಮಿತ್​​ ಜೈಲು ಸೇರಿದ ಬಳಿಕ ಇವರೆಲ್ಲಾ ಅನಿವಾರ್ಯವಾಗಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ…

About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!