Sunday , September 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ಜಾಕ್ವೀನ್​ ಫರ್ನಾಂಡೀಸ್​ ಜೊತೆ ಅಸಭ್ಯ ವರ್ತನೆ : ರಕ್ಷಣೆಗೆ ಬಂದ ವರುಣ್​​ ಧವನ್​

ಜಾಕ್ವೀನ್​ ಫರ್ನಾಂಡೀಸ್​ ಜೊತೆ ಅಸಭ್ಯ ವರ್ತನೆ : ರಕ್ಷಣೆಗೆ ಬಂದ ವರುಣ್​​ ಧವನ್​

ಮುಂಬೈ : ಸೆಕ್ಸಿ ಬೆಡಗಿ ಜಾಕ್ವೀನ್ ಫರ್ನಾಂಡೀಸ್​ ಈಗ ಬಾದ್​ಶಾಹೋ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಪ್ರಮೋಷನ್​ ವೇಳೆ ಜಾಕ್ವೀನ್​ಗೆ ಸಂಕಷ್ಟ ಎದುರಾಗಿತ್ತು. ಅವಳಿ ಜೋಡಿಯೊಂದು ಜಾಕ್ವೀನ್ ಜೊತೆ ಅಸಭ್ಯವಾಗಿ ವರ್ತಿಸಿತ್ತು. ಭದ್ರತೆಗೆ ಹಾಕಿದ್ದ ಬ್ಯಾರಿಕೇಟನ್ನೂ ಸರಿಸಿ ಪ್ರವೇಶಿಸಿದ್ದ ಈ ಜೋಡಿ ಸೆಲ್ಫಿ ತೆಗೆದು ಕಾಟ ಕೊಡುತ್ತಿತ್ತು. ಇದರಿಂದ ಜಾಕ್ವೀನ್​ ಇರುಸು ಮುರುಸು ಅನುಭವಿಸಿದ್ದರು. ಆಗ ನಟ ವರುಣ್ ಧವನ್​ ಜಾಕ್ವೀನ್ ರಕ್ಷಣೆಗೆ ಬಂದರು. ಈ ಸಂದರ್ಭದಲ್ಲಿ ನಟಿ ತಾಪ್ಸಿ ಕೂಡಾ ಇವರೊಂದಿಗೆ ಇದ್ದರು.

ಈ ಪ್ರಚಾರದಲ್ಲಿ 50 ಅವಳಿ ಜವಳಿಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ಒಂದು ಜೋಡಿ ಜಾಕ್ವೀನ್​ ಜೊತೆ ಅಸಭ್ಯವಾಗಿ ವರ್ತಿಸಿತ್ತು. ಹೀಗಾಗಿ, ಈ ಜೋಡಿಯನ್ನು ವಾಪಸ್ ಕಳುಹಿಸಿ 49 ಅವಳಿ ಜವಳಿ ಜೋಡಿಯೊಂದಿಗೆ ಚಿತ್ರ ತಂಡ ಸಂವಾದ ನಡೆಸಿತ್ತು.

ಇತ್ತೀಚಿನ ದಿನಗಳಲ್ಲಿ ನಟಿ ಇಂತಹ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಇಲಿಯಾನಾ ಕೂಡಾ ಅಭಿಮಾನಿಗಳ ಅಸಭ್ಯ ವರ್ತನೆಗೆ ಕೆಂಡಾಮಂಡಲರಾಗಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!