Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟ ದಿಲೀಪ್​ಗೆ ಒಂದೂವರೆಗೆ ಗಂಟೆ ಜೈಲಿನಿಂದ ಹೊರ ಹೋಗಲು ಅವಕಾಶ : ಪತಿ ನೋಡಿ ಕಣ್ಣೀರಿಟ್ಟ ಪತ್ನಿ

ನಟ ದಿಲೀಪ್​ಗೆ ಒಂದೂವರೆಗೆ ಗಂಟೆ ಜೈಲಿನಿಂದ ಹೊರ ಹೋಗಲು ಅವಕಾಶ : ಪತಿ ನೋಡಿ ಕಣ್ಣೀರಿಟ್ಟ ಪತ್ನಿ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಷಡ್ಯಂತ್ರ ರೂಪಿಸಿದ ಆರೋಪದಲ್ಲಿ ಜೈಲು ಸೇರಿರುವ ಮಲಯಾಳಂ ನಟ ದಿಲೀಪ್​ಗೆ ಒಂದೂವರೆಗೆ ಗಂಟೆಗಳ ಕಾಲ ಜೈಲಿನಿಂದ ಹೊರ ಹೋಗುವ ಅವಕಾಶ ಸಿಕ್ಕಿದೆ. ತಂದೆಯ ವರ್ಷಾಂತಿಕವನ್ನು ನಡೆಸುವ ಸಲುವಾಗಿ ನ್ಯಾಯಾಲಯ ದಿಲೀಪ್​ಗೆ ಈ ಅವಕಾಶ ನೀಡಿತ್ತು. ಹೀಗಾಗಿ, ಅಲುವಾ ಉಪ ಬಂಧಿಖಾನೆಯಲ್ಲಿ ಸುಮಾರು 40 ದಿನಗಳಿಂದ ಇರುವ ದಿಲೀಪ್​ ಮನೆಗೆ ಭೇಟಿ ನೀಡಿದ್ದಾರೆ.

ಭದ್ರತೆಯ ಕಾರಣದಿಂದ ದಿಲೀಪ್​​ರನ್ನು ಪೊಲೀಸರು ನ್ಯಾಯಾಲಯಕ್ಕೂ ಹಾಜರು ಪಡಿಸಿಲ್ಲ. ವೀಡಿಯೋ ಕಾನ್ಫರೆನ್ಸ್​ನಲ್ಲೇ ವಿಚಾರಣೆ ನಡೆಯುತ್ತಿದೆ. ಈಗ ಸುಮಾರು ಒಂದೂವರೆ ಗಂಟೆಗಳ ಕಾಲ ಜೈಲಿನಿಂದ ಹೊರ ಹೋಗಲು ಅವಕಾಶ ಸಿಕ್ಕಿರುವುದು ಆರೋಪಿ ದಿಲೀಪ್​ಗೂ ಕೊಂಚ ಖುಷಿ ಕೊಟ್ಟಿದೆ. ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಪೊಲೀಸರು ಆರೋಪಿ ದಿಲೀಪ್​ರನ್ನು ಅಲುವಾದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಗ್ಗೆ ಸುಮಾರು 8 ಗಂಟೆಗೆ ದಿಲೀಪ್​ ಮನೆಗೆ ಹೋಗಿದ್ದಾರೆ. 9 ಗಂಟೆಗೆ ಕುಟುಂಬದ ಆಪ್ತರ ಸಮ್ಮುಖದಲ್ಲಿ ದಿಲೀಪ್ ತಂದೆಯ ವರ್ಷಾಂತಿಕದ ವಿಧಿ ವಿಧಾನಗಳು ನಡೆದಿವೆ.

9.45ರ ಸುಮಾರಿಗೆ ದಿಲೀಪ್​ರನ್ನು ಪೊಲೀಸರು ಕರೆದುಕೊಂಡು ಹೋದಾಗ ಎಲ್ಲರೂ ಕಣ್ಣೀರಿನಲ್ಲಿ ಮುಳುಗಿದರು. ಪತ್ನಿ ಕಾವ್ಯಾ ಮಾಧವನ್​ ಕೂಡಾ ಕಣ್ಣೀರಿಡಲು ಆರಂಭಿಸಿದ್ದರು.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!