Friday , September 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಉದ್ಯಮಿ ಪ್ರೇಮ ಪಾಶದಲ್ಲಿ ಕಾಜಲ್ ಅಗರ್​ವಾಲ್ ಬಂಧಿ…?

ಉದ್ಯಮಿ ಪ್ರೇಮ ಪಾಶದಲ್ಲಿ ಕಾಜಲ್ ಅಗರ್​ವಾಲ್ ಬಂಧಿ…?

ಹೈದರಾಬಾದ್​ : ದಕ್ಷಿಣ ಭಾರತದ ಸುಂದರ ನಟಿ ಕಾಜಲ್​ ಅಗರ್​ವಾಲ್​​ ಹಲವು ಸ್ಟಾರ್​ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಸದ್ಯ ಚಿತ್ರರಂಗದಲ್ಲಿ ಏಳು ಬೀಳುಗಳನ್ನು ಕಾಣುತ್ತಿದ್ದರೂ ಕಾಜಲ್​ ಮತ್ತೆ ಪುಟಿದೇಳುತ್ತಲೇ ಇದ್ದಾರೆ. ತಮಿಳಿನಲ್ಲಿ ಅಜಿತ್​ ಜೊತೆಗಿನ ವಿವೇಗಂ ಚಿತ್ರ ಇವರಿಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟರೆ, ತೆಲುಗಿನ ನೇನೇ ರಾಜು ನೇನೇ ಮಂತ್ರಿ ಒಳ್ಳೆಯ ಹೆಸರು ತಂದುಕೊಟ್ಟಿದೆ. ಇನ್ನು, ತಮಿಳಿನಲ್ಲಿ ವಿಜಯ್ ಜೊತೆಗಿನ ಮಿರ್ಸಲ್​ ಎಂಬ ಚಿತ್ರವೂ ಕುತೂಹಲ ಮೂಡಿಸಿದ್ದು, ಅಕ್ಟೋಬರ್​ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಈ ನಡುವೆ, ಫಿಲ್ಮ್​ ನಗರ್​​ನಲ್ಲಿ ಕಾಜಲ್​​​ ಪ್ರೇಮದ ವಿಚಾರದ ಸುದ್ದಿ ಈಗ ಹರಿದಾಡುತ್ತಿದೆ. ಉದ್ಯಮಿಯೊಂದಿಗೆ ಕಾಜಲ್​ ಪ್ರೀತಿಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ತನ್ನ ಪ್ರೀತಿಯ ವಿಚಾರ ಕಾಜಲ್​ ಗುಟ್ಟಾಗಿ ಇಟ್ಟಿದ್ದಾರಂತೆ. ಇದರೊಂದಿಗೆ ಇನ್ನೂ ಒಂದು ಸುದ್ದಿ ಇದೆ. ಅದೇನೆಂದರೆ ಕಾಜಲ್ ಟಾಲಿವುಡ್​ನ ಟಾಪ್ ಹೀರೋ ಒಬ್ಬರ ಜೊತೆ ಡೇಟಿಂಗ್​ನಲ್ಲಿದ್ದಾರಂತೆ. ಈ ಸುದ್ದಿಗಳೇನೇ ಇದ್ದರೂ ಕಾಜಲ್​ ತನ್ನ ಪ್ರೀತಿಯ ಬಗೆಗಿನ ಒಂದೂ ಗುಟ್ಟನ್ನೂ ಈಗ ಬಿಟ್ಟು ಕೊಟ್ಟಿಲ್ಲ. ಹೀಗಾಗಿ, ಇವಿನ್ನೂ ಗಾಸಿಪ್​ ರೂಪದಲ್ಲೇ ಇದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!