Monday , January 21 2019
ಕೇಳ್ರಪ್ಪೋ ಕೇಳಿ
Home / Film News / Tollywood / ಮಾಸ್​ ಹೀರೋ ರವಿ ತೇಜಾಪುತ್ರ ಟಾಲಿವುಡ್​ಗೆ ಎಂಟ್ರಿ…!

ಮಾಸ್​ ಹೀರೋ ರವಿ ತೇಜಾಪುತ್ರ ಟಾಲಿವುಡ್​ಗೆ ಎಂಟ್ರಿ…!

ಹೈದರಾಬಾದ್​ : ಟಾಲಿವುಡ್​ನಲ್ಲಿ ಸ್ಟಾರ್​ಗಳ ಮಕ್ಕಳೇ ಈಗ ಆಳುತ್ತಿದ್ದಾರೆ. ಇಲ್ಲಿ ಟಾಲಿವುಡ್​ ಮಾತ್ರ ಅಲ್ಲ, ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ಸ್ಟಾರ್​ಗಳ ಮಕ್ಕಳೇ ಆಳ್ವಿಕೆ ಮಾಡುತ್ತಿದ್ದಾರೆ. ತಂದೆಯ ಹೆಸರಿನೊಂದಿಗೆಯೇ ಈ ಮಕ್ಕಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ ಎಂಬುದು ಸಾರ್ವಕಾಲಿಕ ಸತ್ಯ. ಆದರೂ, ತಮ್ಮದೇ ಸ್ವಂತ ಪ್ರತಿಭೆ, ಸಾಧನೆಯಿಂದ ಇವರೆಲ್ಲಾ ಚಿತ್ರರಂಗದಲ್ಲಿ ಆಳ್ವಿಕೆ ಮಾಡುತ್ತಿದ್ದಾರೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಈಗ ಟಾಲಿವುಡ್​ನ ಇನ್ನೋರ್ವ ಸ್ಟಾರ್ ಕಿಡ್​ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದೆ. ಟಾಲಿವುಡ್​ನ ಮಾಸ್​ ಹೀರೋ ರವಿತೇಜಾ ತನ್ನ ಪುತ್ರ ಮಹಾಧನ್​ರನ್ನು ಪರಿಚಯಿಸಲು ಸಜ್ಜಾಗಿದ್ದಾರೆ. ಸುಮಾರು 22 ತಿಂಗಳ ಲಾಂಗ್ ಗ್ಯಾಪ್ ಬಳಿಕ ರವಿತೇಜಾ ಚಿತ್ರರಂಗಕ್ಕೆ ಮತ್ತೆ ಬರುತ್ತಿದ್ದಾರೆ. ಈ ಚಿತ್ರದ ನಾಯಕನ ಬಾಲ್ಯದ ಪಾತ್ರವನ್ನು ಮಹಾಧನ್​ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ ನ್ಯೂಸ್​ ಹೊರಬಿದ್ದಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!