Tuesday , February 19 2019
ಕೇಳ್ರಪ್ಪೋ ಕೇಳಿ
Home / Sudina Special / ಜೀವ ತೆಗೆಯುವ ‘ಬ್ಲೂ ವೇಲ್​’  : ಸಾವಿನಂಚಿಗೆ ಹೋಗಿಬಂದವ ಹೇಳಿದ್ದೇನು..?

ಜೀವ ತೆಗೆಯುವ ‘ಬ್ಲೂ ವೇಲ್​’  : ಸಾವಿನಂಚಿಗೆ ಹೋಗಿಬಂದವ ಹೇಳಿದ್ದೇನು..?

ಕಾರೈಕಲ್​​, ಪುದುಚೇರಿ : 22 ವರ್ಷದ ಪುದುಚೇರಿಯ ಯುವಕ ಅಲೆಕ್ಸಾಂಡರ್​.. ಬ್ಲೂ ವೇಲ್​ ಗೇಮ್​​ನ ಎಲ್ಲಾ ಕಠಿಣ ಸವಾಲುಗಳನ್ನು ದಾಟಿ ಅಂತಿಮ ಹಂತಕ್ಕೆ ಬಂದು ತಲುಪಿದ್ದ. 50ನೇ ದಿನದ ಕೊನೆಯ ಟಾಸ್ಕ್​​ ಆತ್ಮಹತ್ಯೆ ಮಾಡಿಕೊಳ್ಳುವುದಷ್ಟೇ ಬಾಕಿ ಇತ್ತು. ಹೇಗೋ ಈ ಸುದ್ದಿ ಕಾರೈಕಲ್​ ಪೊಲೀಸರಿಗೆ ಗೊತ್ತಾಗಿ ಹೋಗಿತ್ತು. ಈತನ ಮನೆಗೆ ಧಾವಿಸಿದ ಪೊಲೀಸರು ಯುವಕನನ್ನು ಸಾವಿನ ದವಡೆಯಿಂದ ಎಳೆದು ತಂದಿದ್ದರು. ಈ ಯುವಕ ಭಯಾನಕ ಅನುಭವವನ್ನು ಪೊಲೀಸರ ಮುಂದೆ ಹಂಚಿಕೊಂಡಿದ್ದಾನೆ.

ಅಲೆಕ್ಸಾಂಡರ್ ಭಯಾನಕ ಅನುಭವ..! : ಬ್ಲೂ ವೇಲ್​ ಗೇಮ್​ನದ್ದು ಒಂದು ಭಯಾನಕ ಅನುಭವ. ಯಾರು ಎಷ್ಟೇ ಸಾಹಸಿಗರಾಗಿದ್ದರೂ ಮಾನಸಿಕವಾಗಿ ಬಳಲಿ ಬೆಂಡಾಗುವುದು ಖಂಡಿತ. ಪ್ರತಿಯೊಬ್ಬರೂ ಬ್ಲೂ ವೇಲ್​ ಆಟದಿಂದ ದೂರ ಇರುವುದು ಒಳ್ಳೆಯದು. ನಾನು ಈ ಆಟದಿಂದ ಹೊರಬರಲು ಬಹಳ ಪ್ರಯತ್ನ ಪಟ್ಟೆ. ಆದರೆ ಸಾಧ್ಯವಾಗಲಿಲ್ಲ. ಇದು ನಿಜವಾಗಲೂ ಸಾವಿನ ಬಾವಿ.

2 ವಾರಗಳ ಹಿಂದೆ ನನ್ನ ಸಹೋದ್ಯೋಗಿಗಳ ವಾಟ್ಸ್​ಆಪ್​ ಗ್ರೂಪ್​​ನಲ್ಲಿ  ಈ ಗೇಮ್​ನ ಲಿಂಕ್​ ನನಗೆ ಸಿಕ್ಕಿತ್ತು. ನಾನು ರಜೆ ಮೇಲೆ ನನ್ನೂರು ನೆರವಿ ಎಂಬಿಲ್ಲಿಗೆ ಹೋಗಿದ್ದಾಗ ಬ್ಲೂ ವೇಲ್​ ಗೇಮ್​ ಆಡಲು ಆರಂಭ ಮಾಡಿದೆ. ನನಗೆ ಈ ಆಟ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ ನಾನು ಚೆನ್ನೈಗೆ ಮರಳಿ ಹೋಗಲೇ ಇಲ್ಲ. ಕೆಲಸವನ್ನೇ ಬಿಟ್ಟು ಬಿಟ್ಟೆ. ಅಡ್ಮಿನ್​ ಕೊಡುವ ಟಾಸ್ಕ್​​ ಅನ್ನು ಬೆಳಗ್ಗೆ 2 ಗಂಟೆಯ ನಂತರವೇ ಮುಗಿಸಬೇಕಿತ್ತು. ಇಂತಹ ಕಠಿಣ ಟಾಸ್ಕ್​​ಗಳನ್ನು ಅಡ್ಮಿನ್​​ ಕೊಡುತ್ತಿದ್ದರು. ಮೊದಲು ಕೆಲವು ದಿನ ನನ್ನ ವೈಯಕ್ತಿಕ ವಿವರಗಳು ಮತ್ತು ಫೋಟೋಗಳನ್ನು ಬ್ಲೂ ವೇಲ್​ ಅಡ್ಮಿನ್​​ಗೆ ಕಳುಹಿಸಿಕೊಟ್ಟಿದ್ದೆ. ನಂತರ ನನಗೆ ಮಧ್ಯರಾತ್ರಿಯ ವೇಳೆ ಸ್ಮಶಾನಕ್ಕೆ ಹೋಗುವ ಟಾಸ್ಕ್​ ಕೊಟ್ಟಿದ್ದರು. ನಾನು ಅಕ್ಕರೈವಟ್ಟಮ್​ ಸ್ಮಶಾನಕ್ಕೆ ನಡುರಾತ್ರಿಯಲ್ಲೇ ಹೋಗಿ ಬಂದೆ. ಅಲ್ಲೇ ಸೆಲ್ಫೀ ತೆಗೆದು ಅಡ್ಮಿನ್​​ಗೆ ಕಳುಹಿಸಿಕೊಟ್ಟೆ. ನಂತರ ಪ್ರತಿ ದಿನ ನಾನೊಬ್ಬನೇ ಹಾರರ್​​ ಚಿತ್ರಗಳನ್ನು ನೋಡಬೇಕಿತ್ತು. ಯಾಕೆಂದರೆ ಈ ಗೇಮ್​ಗೆ ಬಲಿಯಾಗೋ ವ್ಯಕ್ತಿಗಳಲ್ಲಿ ಭಯ ಎನ್ನುವುದು ಇರಬಾರದು ಎಂಬ ಉದ್ದೇಶ ಅವರದ್ದು. ನಾನು ಮನೆಯಲ್ಲಿ ಯಾರ ಹತ್ತಿರವೂ ಮಾತನಾಡುತ್ತಿರಲಿಲ್ಲ. ನನ್ನ ರೂಮ್​​ನಲ್ಲಿ ಒಂಟಿಯಾಗಿಯೇ ಇರುತ್ತಿದ್ದೆ. ಹೀಗಾಗಿ ನಾನು ಮಾನಸಿಕವಾಗಿ ಬಹಳ ಕುಂದು ಹೋಗಿದ್ದೆ. ನಾನು ಈ ಗೇಮ್​​ನಿಂದ ಹೊರಬರಬೇಕೆಂದುಕೊಂಡಿದ್ದೆ. ಆದರೆ ಬರಲಾಗಲಿಲ್ಲ.

ಅಲೆಕ್ಸಾಂಡರ್​ ಆಯುಷ್ಯ ಗಟ್ಟಿಯಿತ್ತು ಅನ್ನಿಸುತ್ತದೆ. ಅಲೆಕ್ಸಾಂಡರ್​ ನಡವಳಿಕೆಗಳನ್ನು ಗಮನಿಸಿದ​ ಸಹೋದರ ಅಜಿತ್​ ರಾತ್ರಿಯೇ ಪೊಲೀಸ್​ ಠಾಣೆಗೆ ಹೋಗಿ ಅವರಿಗೆ ಎಲ್ಲಾ ವಿಚಾರಗಳನ್ನೂ ವಿವರಿಸಿದ್ದಾನೆ. ನಸುಕಿನ ಜಾವ 4ಕ್ಕೆ ಪೊಲೀಸ್​ ತಂಡ ಅಲೆಕ್ಸಾಂಡರ್​ ಮನೆಗೆ ತೆರಳಿತ್ತು. ಆಗ ಅಲೆಕ್ಸಾಂಡರ್ ಬ್ಲೂ ವೇಲ್​ ಗೇಮ್​​ನಲ್ಲಿ ಮುಳುಗಿಹೋಗಿದ್ದ. ಕೈಯ್ಯಲ್ಲಿ ಹರಿತವಾದ ಚಾಕು ಹಿಡಿದುಕೊಂಡು ಕೈ ಮೇಲೆ ಬ್ಲೂ ವೇಲ್​ ​ಚಿತ್ರವನ್ನು ಚೂರಿಯಿಂದಲೇ ಕೊಯ್ದುಕೊಂಡು ಬಿಡಿಸಿಕೊಳ್ಳಲು ಮುಂದಾಗಿದ್ದ. ಪೊಲೀಸರು ಮನವೊಲಿಸಿ ಸಾವಿನಿಂದ ಈತನನ್ನು ಪಾರುಮಾಡಿದ್ದಾರೆ.

ಹಲವು ಸಲ ಕೌನ್ಸೆಲಿಂಗ್​ ನಡೆದ ಬಳಿಕ ಈಗ ನಾನು ಮೊದಲಿನಂತಾಗಿದ್ದೇನೆ ಎಂದು ಯುವಕ ಅಲೆಕ್ಸಾಂಡರ್​ ಬ್ಲೂ ಬೇಲ್​ ಸೂಸೈಡ್​ ಚಾಲೆಂಜ್​​ನ ಭಯಾನಕ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾನೆ. ಭಾರತದಲ್ಲಿ ಬ್ಲೂ ವೇಲ್​ ಗೇಮ್​​ ತನ್ನ ಕಬಂಧ ಬಾಹುಗಳನ್ನು ಚಾಚಲು ಶುರುಮಾಡಿದೆ. ಈಗಾಗಲೇ ಐವರು ಈ ಆಟಕ್ಕೆ ಬಲಿಯಾಗಿದ್ದಾರೆ. ಈ ಗೇಮ್​ನ ಮೂಲ ರಷ್ಯಾ. 3 ವರ್ಷಗಳ ಹಿಂದೆ ಆರಂಭವಾದ ಬ್ಲೂ ವೇಲ್​ ಗೇಮ್​​ ವಿಶ್ವಾದ್ಯಂತ 100 ಜೀವಗಳನ್ನು ಬಲಿಪಡೆದಿದೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!