Thursday , November 15 2018
ಕೇಳ್ರಪ್ಪೋ ಕೇಳಿ
Home / News NOW / ಮಹಿಳಾ ಪೊಲೀಸ್ ಜೊತೆ ಹಿರಿಯ ಅಧಿಕಾರಿಯ ಅಸಭ್ಯ ವರ್ತನೆ : ಇಲ್ಲಿದೆ ವೀಡಿಯೋ

ಮಹಿಳಾ ಪೊಲೀಸ್ ಜೊತೆ ಹಿರಿಯ ಅಧಿಕಾರಿಯ ಅಸಭ್ಯ ವರ್ತನೆ : ಇಲ್ಲಿದೆ ವೀಡಿಯೋ

ಚೆನ್ನೈ : ನೀಟ್​ ಪ್ರತಿಭಟನೆಯ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪೊಲೀಸ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವೀಡಿಯೋ ಈಗ ವೈರಲ್ ಆಗಿದೆ. ಆನ್​ಲೈನ್​ನಲ್ಲಿ ಈ ವೀಡಿಯೋ ಈಗ ಹರಿದಾಡುತ್ತಿದೆ. ಸೋಮವಾರ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಾಧ್ಯಮಗಳ ವರದಿ ಪ್ರಕಾರ ಈ ಹಿರಿಯ ಅಧಿಕಾರಿ ಉದ್ದೇಶ ಪೂರ್ವಕವಾಗಿ ಈ ರೀತಿ ವರ್ತಿಸಿಲ್ಲ. ಪ್ರತಿಭಟನಾಕಾರರ ಗುಂಪು ಚದುರಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅದೂ ಅಲ್ಲದೆ, ಮಹಿಳಾ ಪೊಲೀಸ್​ ಕೂಡಾ ಈ ಬಗ್ಗೆ ಯಾವುದೇ ದೂರನ್ನು ಕೊಟ್ಟಿಲ್ಲ.ಆದರೆ, ಈ ಬಗ್ಗೆ ಪರ ವಿರೋಧ ಮಾತುಗಳು ಈಗ ಜೋರಾಗಿಯೇ ಕೇಳಿ ಬರುತ್ತಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!