Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಫುಲ್​ ಟೈಮ್​ ತಾಯ್ತನದ ಖುಷಿಯಲ್ಲಿ ಸನ್ನಿ ಲಿಯೋನ್​

ಫುಲ್​ ಟೈಮ್​ ತಾಯ್ತನದ ಖುಷಿಯಲ್ಲಿ ಸನ್ನಿ ಲಿಯೋನ್​

ಮುಂಬೈ : ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್​ ಈಗ ಭಾರತದಲ್ಲಿ ದೊಡ್ಡ ಸ್ಟಾರ್. ಆನ್​ ಸ್ಕ್ರೀನ್​ನಲ್ಲಿ ಸೆಕ್ಸ್​​​ ಬಾಂಬ್​ ಆಗಿ ಕಾಣಿಸಿಕೊಂಡರೂ, ಹಣಕ್ಕಾಗಿ ಕ್ಯಾಮೆರಾದ ಮುಂದೆ ಬೆತ್ತಲಾಗಾದರೂ ಸನ್ನಿ ಎಲ್ಲರಿಗಿಂತ ಭಿನ್ನ. ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕಿಂತಲೂ ವಿಶಾಲ ಹೃದಯಿ ಸನ್ನಿ ಲಿಯೋನ್​. ಅಲ್ಲದೆ, ಸಾಕ್ಷಿ ಸನ್ನಿ ಮತ್ತು ಪತಿ ಡೇನಿಯಲ್​ ವೇಬರ್​​ ಅನಾಥ ಮಗುವನ್ನು ದತ್ತು ತೆಗೆದುಕೊಂಡಿರುವುದೇ ಸಾಕ್ಷಿ…

ಮುಂಬೈಯ ಸ್ಲಮ್​ನಲ್ಲಿ ಅನಾಥವಾಗಿದ್ದ ಎರಡು ವರ್ಷದ ಮಗುವನ್ನು ಕಾನೂನು ಪ್ರಕಾರ ಈ ದಂಪತಿ ದತ್ತು ಪಡೆದುಕೊಂಡಿದ್ದಾರೆ. ನಿಶಾ ಕೌರ್​ ಎಂದು ಈ ಮಗುವಿಗೆ ಹೆಸರೂ ಇಟ್ಟಿದ್ದಾರೆ ಈ ದಂಪತಿ. ಇದಾದ ಬಳಿಕ ಈ ದಂಪತಿ ಬಹುಕಾಲ ಈ ಮಗುವಿನೊಂದಿಗೆಯೇ ಕಳೆಯುತ್ತಿದ್ದರು. ಎಲ್ಲಿ ಹೋದರೂ ಸನ್ನಿ ಮಗುವಿನ ಬಗ್ಗೆಯೇ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಅದೂ ಅಲ್ಲದೆ, ಮಗುವಿಗಾಗಿ ಸನ್ನಿ ತನ್ನ ಜೀವನ ಶೈಲಿಯನ್ನೂ ಬದಲು ಮಾಡಿಕೊಂಡಿದ್ದಾರೆ. ಲೇಟ್​ ನೈಟ್​ ಲೈಫ್​ ಅನ್ನು ಕಡಿಮೆ ಮಾಡಿರುವ ಸನ್ನಿ ಸಂಪೂರ್ಣ ಮಗುವಿಗಾಗಿ ಬದುಕು ಮೀಸಲಿದ್ದಾರೆ. ಸ್ವತಃ ತಾವೇ ಮಗುವಿಗೆ ಊಟ ಕೂಡಾ ಮಾಡಿಸುತ್ತಿದ್ದಾರೆ.

ತೆರೆ ಮೇಲೆ ಸನ್ನಿಯನ್ನು ಕಂಡು ಕೆಟ್ಟದಾಗಿ ಮಾತನಾಡುವವರೆಲ್ಲಾ ಈಗ ತಮ್ಮ ಅಭಿಪ್ರಾಯವನ್ನು ಬದಲು ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ, ಸನ್ನಿ ಮಾನವತೆಗೆ ದೊಡ್ಡ ಉದಾಹರಣೆಯೂ ಆಗಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!