Saturday , February 16 2019
ಕೇಳ್ರಪ್ಪೋ ಕೇಳಿ
Home / Mumbai Mail / 1993ರ ಮುಂಬೈ ಸರಣಿ ಸ್ಫೋಟ : ಅಬು ಸಲೇಂಗೆ ಜೀವಾವಧಿ, ರಹೀರ್​ಗೆ ಗಲ್ಲು

1993ರ ಮುಂಬೈ ಸರಣಿ ಸ್ಫೋಟ : ಅಬು ಸಲೇಂಗೆ ಜೀವಾವಧಿ, ರಹೀರ್​ಗೆ ಗಲ್ಲು

ಮುಂಬೈ : ದೇಶವನ್ನೇ ತಲ್ಲಣಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಪಾತಕಿ ಅಬು ಸಲೇಂ ಮತ್ತು ಕರಾಮುಲ್ಲಾ ಖಾನ್​ಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ಹಾಗೂ ರಹೀಮ್ ಮರ್ಚೆಂಟ್​ ಮತ್ತು ಫಿರೋಜ್​ ಖಾನ್​ಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇನ್ನು ರಿಯಾದ್ ಸಿದ್ದಿಕಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕಳೆದ ಜೂನ್​ 16 ರಂದು ಪ್ರಕರಣದ ಮಾಸ್ಟರ್ ಮೈಂಡ್ ಮುಸ್ತಫಾ ದೋಸಾ ಸೇರಿದಂತೆ ಆರು ಮಂದಿಗಳು ಅಪರಾಧಿಗಳು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. ಇದರಲ್ಲಿ ಮುಸ್ತಫಾ ದೋಸಾ ಸಾವನ್ನಪ್ಪಿದ್ದಾನೆ.

1993ರಲ್ಲಿ ನಡೆದ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 713 ಮಂದಿ ಗಾಯಗೊಂಡಿದ್ದರು. ಘಟನೆ ನಡೆದೆ 24 ವರ್ಷಗಳ ನಂತರ ಟಾಡಾ ವಿಶೇಷ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!