Tuesday , October 16 2018
ಕೇಳ್ರಪ್ಪೋ ಕೇಳಿ
Home / Sudina Special / ಕ್ರೀಸ್​​ನಲ್ಲೇ 4.5 ಕೆಜಿ ತೂಕ ಕಳೆದುಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​​..!

ಕ್ರೀಸ್​​ನಲ್ಲೇ 4.5 ಕೆಜಿ ತೂಕ ಕಳೆದುಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​​..!

ಚಿತ್ತಗಾಂಗ್​​, ಬಾಂಗ್ಲಾದೇಶ: ಮೈಸುಡುವ ಬಿಸಿಲು, ಜೊತೆಗೆ ಆಯಾಸ ಬ್ಯಾಟ್ಸ್​ಮನ್​​​ ಮೇಲೆ ಇದು ಎಷ್ಟು ಪರಿಣಾಮ ಬೀರಿತ್ತು ಎಂದರೆ ಊಹಿಸಲೂ ಅಸಾಧ್ಯ. ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್​​ ಪೀಟರ್​ ಹ್ಯಾಂಡ್ಸ್​ಕೊಂಬ್​ ಎರಡೂವರೆ ಗಂಟೆಗಳ ಕಾಲ ಕ್ರೀಸ್​​ನಲ್ಲಿ ಬ್ಯಾಟಿಂಗ್​ ನಡೆಸಿ 4.5 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಆತಿಥೇಯ ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್​​ನಲ್ಲಿ ಆಸ್ಟ್ರೇಲಿಯಾ 2 ನೇ ಟೆಸ್ಟ್​​ ಆಡುತ್ತಿದೆ. 2ನೇ ದಿನದಾಟದ ವೇಳೆ ಚಿತ್ತಗಾಂಗ್​ನಲ್ಲಿ ಉಷ್ಣತೆ 30 ಡಿಗ್ರಿ ಸೆಲ್ಸಿಯಸ್​ ಇತ್ತು. ತೇವಾಂಶ ಶೇ80ಕ್ಕೆ ತಲುಪಿತ್ತು. ಈ ಬಿಸಿ ವಾತಾವರಣದಲ್ಲಿ ಹ್ಯಾಂಡ್ಸ್​ಕೊಂಬ್​ ಬ್ಯಾಟಿಂಗ್​ ಮಾಡಲು ಒದ್ದಾಡುತ್ತಿದ್ದರೂ ಕ್ರಿಸ್​ ಬಿಟ್ಟು ಮಾತ್ರ ಕದಲಲಿಲ್ಲ. ಆದರೆ ದಿನದಾಟ ಮುಗಿಯುವ ಹೊತ್ತಿಗೆ ಬಳಲಿ ಬೆಂಡಾಗಿದ್ದರು. ಜೊತೆಗೆ ಡಿಹೈಡ್ರೇಶನ್​​ಗೆ ತುತ್ತಾಗಿದ್ದರು. ನಂತರ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದರು. ಉಪಖಂಡದ ಉಷ್ಣತೆಗೆ ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರನೊಬ್ಬ ತತ್ತರಿಸಿದ್ದು ಇದೇ ಮೊದಲಲ್ಲ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್​ ಜೋನ್ಸ್​ 1986ರಲ್ಲಿ ಮದ್ರಾಸ್​ ಟೆಸ್ಟ್​ ವೇಳೆ ಬಿಸಿ ವಾತಾವರಣದಲ್ಲಿ ಬ್ಯಾಟಿಂಗ್​ ಮಾಡಲು ಒದ್ದಾಡಿದ್ದರು. ಬಿರು ಬಿಸಿಲಿನ ನಡುವೆಯೂ ಡೀನ್​ ಜೋನ್ಸ್​ ಟೆಸ್ಟ್​ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ್ದರು.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!